ಕಲಬುರಗಿ,ಮೇ,24,2025 (www.justkannada.in): ಸಚಿವ ಪ್ರಿಯಾಂಕ್ ಖರ್ಗೆಗೆ ಅವಹೇಳನಕಾರಿ ಪದ ಬಳಕೆ ಆರೋಪದ ಮೇಲೆ ಕಲಬುರಗಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ದಿಗ್ಬಂಧನ ಹಾಕಿ ಕಾರಿಗೆ ಮಸಿ ಬಳಿದ ಘಟನೆ ಕುರಿತು ಎಂಎಲ್ ಸಿ ಸಿ.ಟಿ ರವಿ ಪ್ರತಿಕ್ರಿಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿ.ಟಿ ರವಿ, ವಿರೋಧ ಪಕ್ಷದ ನಾಯಕರನ್ನ ಶ್ಯಾಡೋ ಸಿಎಂ ಅಂತಾರೆ ಅವರ ಮೇಲೆ ದೌರ್ಜನ್ಯ ಮಾಡುವುದು ಸರಿನಾ? ಗೂಂಡಾಗಿರಿ ಮಾಡುವುದಲ್ಲದೆ ಸಮರ್ಥನೆ ಮಾಡಿಕೊಳ್ಳುತ್ತೀರಿ? ವಯನಾಡಿನಲ್ಲಿ ನಿಮ್ಮ ತಂದೆಯವರನ್ನ ಹೊರಗಡೆ ನಿಲ್ಲಿಸಿದ್ದರು ಆಗ ನೀವು ಆಕ್ರೋಶ ಹೊರಹಾಕಬೇಕಿತ್ತು. ರಿಪಬ್ಲಿಕ್ ಕಲಬುರಗಿ ಅಂತಾ ಭಾವಿಸಿದ್ರೆ ಆಗಲ್ಲ. ಇಲ್ಲಿನ ಜನರು ರಜಾಕಾರರ ವಿರುದ್ದ ಹೋರಾಟ ಮಾಡಿದವರು ಪ್ರಧಾನಿಯನ್ನ ಪ್ರಶ್ನೆ ಮಾಡಬಾರದು ಅಂತೇನಿಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಪ್ರಶ್ನೆ ಮಾಡಬಹುದು ಆದ್ರ ನಮ್ಮ ದೇಶದ ಸೈನಿಕರ ವಿರುದ್ದ ಮಾತನಾಡುವುದು ತಪ್ಪು ಮಲ್ಲಿಕಾರ್ಜುನ ಖರ್ಗೆ ಮಗ ಅಂದಾಕ್ಷಣ ಎಲ್ಲರೂ ಒಪ್ಪಿಕೊಳ್ಳಲ್ಲ. ಛಲವಾದಿ ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿದರೂ ಗೂಂಡಾಗಿರಿ ಮಾಡುತ್ತೀರಿ. ಚಿತ್ತಾಪುರಕ್ಕೆ ಬನ್ನಿ ಅಂತಾ ಸವಾಲು ಹಾಕಿದ್ರೆ ಹೋಗ್ತೀವಿ ಎಂದು ಗುಡುಗಿದರು.
ರಾಮನಗರ ಹೆಸರು ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಕಾಂಗ್ರೆಸ್ ಪಕ್ಷಕ್ಕೆ ಯಾಕೆ ರಾಮನ ಹೆಸರಿನ ಮೇಲೆ ಕೋಪ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೂ ನೀವು ಬಂದಿಲ್ಲ. ರಾಜಕೀಯಕ್ಕಾಗಿ ರಾಮನಗರ ಹೆಸರು ಬದಲಾವಣೆ ಮಾಡಿದ್ದಾರೆ. ಇತಿಹಾದ ಹಿನ್ನೆಲೆ ಕೊಟ್ಟು ಹೆಸರು ಬದಲಾವಣೆ ಮಾಡುತ್ತಿಲ್ಲ. ಭೂ ಮಾಫಿಯಾ ಬ್ರ್ಯಾಂಡ್ ಗೋಸ್ಕರ ಮಾಡ್ತೀವಿ ಅನ್ನೋದು ಅವರ ಹೇಳಿಕೆ ಎಂದರು.
Key words: Opposition leaders, shadow CM, Minister, Priyank kharge, CT Ravi