ಪರಮೇಶ್ವರ್ ಸಂಕಷ್ಟಕ್ಕೆ ಸಿಲುಕಲು ಪ್ರಭಾವಿ ನಾಯಕ ಕಾರಣ- ಕೇಂದ್ರ ಸಚಿವ ಹೆಚ್.ಡಿಕೆ

ಬೆಂಗಳೂರು,ಮೇ,23,2025 (www.justkannada.in):  ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಂಕಷ್ಟಕ್ಕೆ ಸಿಲುಕಲು ಪ್ರಭಾವಿ ನಾಯಕ ಕಾರಣ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಪರಮೇಶ್ವರ್ ದಲಿತರ ಸಮಾವೇಶ ಮಾಡಲು ಹೊರಟರು. ತಾವೇ ಮುಂದಿನ ಸಿಎಂ ಆಗುತ್ತೇನೆ ಎಂದು ಸಮಾವೇಶಕ್ಕೆ ಮುಂದಾದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪ್ರಭಾವಿ ನಾಯಕನೇ ಅವರನ್ನು ಸಿಲುಕಿಸಿದ್ದಾರೆ. ಇದೆಲ್ಲಾ ಸಿಎಂ ಸಿದ್ದರಾಮಯ್ಯಗೆ ಗೊತ್ತಿಲ್ಲವೇ?  ಮುಂದೆ ಸಿಎಂ ಆಗಲು ಟವಲ್ ಹಾಸಿಕೊಂಡು ಇರುವವರೇ ಸಂದೇಶ ನೀಡಿದ್ದಾರೆ. ಈ ಪ್ರಕರಣ ಹೊರಬರಲು ಸಂದೇಶ ನೀಡಿದ್ದೇ ಕಾಂಗ್ರೆಸ್ ಪ್ರಭಾವಿ ನಾಯಕ. ಸಿಎಂ ಹತ್ತಿರ ಗುಪ್ತಚರ ಇಲ್ಲವೇ ಎಂದು ಪ್ರಶ್ನಿಸಿದರು.

ಇದೆಲ್ಲಾ ಬಿಟ್ಟು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪ್ರಭಾವಿ ನಾಯಕನಿಂದ ಇದೆಲ್ಲಾ ಆಗಿದೆ. ಅದೆನೋ ಎಷ್ಟು ಸಮಿತಿ ಮಾಡುತ್ತಿದ್ದೀರಲ್ಲವೇ, ಅದೆಲ್ಲಾ ಏನಾಯ್ತು. ಮಾತು ಎತ್ತಿದರೆ ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ನುಡಿದಂತೆ ನಡೆಯಲು ಎಷ್ಟು ಟ್ಯಾಕ್ಸ್ ಹಾಕಿದ್ದಾರೆ ಎಂದು ಹೆಚ್.ಡಿಕೆ ಲೇವಡಿ ಮಾಡಿದರು.

ಸಚಿವ ಕೆ.ಎನ್  ರಾಜಣ್ಣ ಕೇಸ್ ನ ಹಿಂದೆ ಇರುವವರು ಯಾರು ಅಂತಾ ಗೊತ್ತಿಲ್ಲವೇ?   ರಾಜಣ್ಣ ಪುತ್ರನ ಹತ್ಯೆಗೆ ಸುಫಾರಿ ಕೇಸ್ ನಲ್ಲಿ  ಯಾರನ್ನ ಬಂಧಿಸಿದ್ದೀರಿ? ಪೆನ್ ಡ್ರೈವ್ ಸೂತ್ರದಾರ ಯಾರು?  ಈಗ ಇಡಿ ವಿರುದ್ದ ಪ್ರತಿಭಟನೆ ಮಾಡುತ್ತೀರಿ. ಯಾರನ್ನೂ ಬೇಕಾದರೂ ಅಪರಾಧಿ ಮಾಡುತ್ತೀರಿ. ಯಾರನ್ನ ಬೇಕಾದರೂ ನಿರಪರಾಧಿ ಮಾಡುತ್ತೀರಿ. ಇವರ ಗ್ಯಾರಂಟಿ ವಿಶ್ವಕ್ಕೆ ಮಾದರಿಯಂತೆ. ಮೊದಲು ಜನರ ಬಳಿ ಹೋಗಿ ನೋಡಲಿ ಎಂದು ಹೆಚ್ .ಡಿಕೆ ಟಾಂಗ್ ಕೊಟ್ಟರು.

Key words: Minister, Parameshwara, trouble, Influential leader, Union Minister, HDK