ಮೈಸೂರು,ಮೇ,23,2025 (www.justkannada.in): ರಾಮನಗರ ಜಿಲ್ಲೆ ಹೆಸರನ್ನ ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ರಾಜ್ಯ ಸರ್ಕಾರಕ್ಕೆ ಹೆಸರು ಬದಲಿಸುವ ಅಧಿಕಾರವಿದೆ. ನಾವು ಆ ಕಾರಣಕ್ಕೆ ಬದಲಾಯಿಸಿದ್ದೇವೆ. ರಾಮನಗರ ಜಿಲ್ಲೆ ಮಾಡಿದಾಗ ಯಾವ ಇತಿಹಾಸ ಇತ್ತು..? ಜನರು ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮಾಡಿ ಅಂದಿದ್ದಾರೆ. ಎಲ್ಲವನ್ನೂ ಜನಾಭಿಪ್ರಾಯದ ಮೇಲೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿರು.
ಮೈಸೂರಿನ ಕೆ.ಆರ್.ನಗರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ಶಿಕ್ಷಣದ ಮೇಲೆ ಇಡಿ ದಾಳಿ ವಿಚಾರ, ಇಡಿ ಅವರು ತನಿಖೆ ಮಾಡಲಿ. ಕಪ್ಪು ಹಣ ಇದ್ದರೆ ಪತ್ತೆ ಹಚ್ಚಿ ಅಂತ ಹೇಳಲ್ಲ. ನೀವು ರಾಜಕೀಯ ದುರುದ್ದೇಶದಿಂದ ಮಾಡಬಾರದು. ಸಂಸ್ಥೆಗಳು ಇರುವುದು ಕಪ್ಪು ಹಣ ತಡೆಗಟ್ಟಲು ಇವೆ. ಪರಮೇಶ್ವರ್ ಕೇಸ್ ನಲ್ಲಿ ರಾಜಕೀಯ ಪ್ರೇರಿತ ದಾಳಿ ಅನಿಸಿದೆ. ಸುಪ್ರೀಂಕೋರ್ಟ್ ಕೂಡ ಗಮನ ಹರಿಸಿ ಮಿತಿ ಮೀರುತ್ತಿದ್ದೀರಿ ಎಂದಿದೆ. ಅವರ ಅಬ್ಜರ್ವೇಷನ್ ಯಾವ ಕಾರಣಕ್ಕೆ ಮಾಡಿದ್ದಾರೆ ಅಂತ ಗೊತ್ತಿಲ್ಲ ಎಂದರು.
ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಾಗುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಈ ವರ್ಷ ಅಪರಾಧ ಪ್ರಕರಣ ಕಡಿಮೆ ಆಗಿವೆ. ಬಿಜೆಪಿ ಅವರ ಕಾಲಕ್ಕೆ ಹೋಲಿಸಿದರೆ ಕಡಿಮೆ ಆಗಿವೆ. ನಾವು ಅಪರಾಧ ನಿಲ್ಲಿಸಿಬಿಡುತ್ತೇವೆ ಅಂತ ಹೇಳುತ್ತಿಲ್ಲ. ಆದರೆ ನಿಯಂತ್ರಣಕ್ಕೆ ತರುತ್ತಿದ್ದೀವಿ ಎಂದರು.
ಕೋವಿಡ್ ಕೇಸ್‌ಗಳ ಹೆಚ್ಚಳಕ್ಕೆ ಕಡಿವಾಣ ಹಾಕಬೇಕು. ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಟೆಸ್ಟಿಂಗ್ ಸೇರಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಯಂಗ್ ಇಂಡಿಯಾ ಕಂಪನಿಗೆ ದೇಣಿಗೆ ಡಿಕೆ ಶಿವಕುಮಾರ್, ಸುರೇಶ್ ಅವರ ವಿರುದ್ಧ ಚಾರ್ಜ್ ಶೀಟ್ ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ದೇಣಿಗೆ ಕೊಡುವುದು ತಪ್ಪಾ? ದೇಣಿಗೆ ಕೊಡುವುದು ತಪ್ಪೇನಲ್ಲ ಎಂದರು.
Key words: Mysore, CM Siddaramaiah , Change, Ramanagara, Name,