ಬೆಂಗಳೂರು,ಮೇ,21,2025 (www.justkannada.in): ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಜನರು ತತ್ತರಿಸಿದ್ದು, ಈ ಮಧ್ಯೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಂದು ನಗರ ಪ್ರದಕ್ಷಿಣೆ ಹಾಕಿ ಮಾಹಿತಿ ಪಡೆದರು.
ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್ ಹಾಕಿ ಹಲವೆಡೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗವಾರದಲ್ಲಿ ವೀರಣ್ಣ ಪಾಳ್ಯ ಜಂಕ್ಷನ್ ಬಳಿ ರಾಜಕಾಲುವೆಯನ್ನ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ವೀಕ್ಷಣೆ ಮಾಡಿದರು.
ನಂತರ ಹೆಚ್ ಬಿಆರ್ ಲೇಔಟ್ 5ನೇ ಬ್ಲಾಕ್ ಗೂ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಮಳೆಹಾನಿ ಪರಿಶೀಲಿಸಿದರು. ಸಿಎಂ ಮತ್ತು ಡಿಸಿಎಂಗೆ ಸಚಿವ ಕೆ.ಜೆ ಜಾರ್ಜ್, ಅಧಿಕಾರಿಗಳು ಸಾಥ್ ನೀಡಿದರು. ಇದೇ ವೇಳೆ ರಾಜಕಾಲುವೆ ಒತ್ತುವರಿ ಆರೋಪ ಕುರಿತು ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದರು.
Key words: CM Siddaramaiah, city rounds, rain-damaged areas, Bangalore