ಹೊಸಪೇಟೆ,ಮೇ,20,2025 (www.justkannada.in): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿದ್ದು, ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ ಗ್ಯಾರಂಟಿ ಯೋಜನೆಗೆ ಜಾರಿಗೊಳಿಸುವ ಆಶ್ವಾಸನೆಯನ್ನ ಈಡೇರಿಸಿದ್ದೇವೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂತಸ ವ್ಯಕ್ತಪಡಿಸಿದರು.
ಇಂದು ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಚುನಾವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆ ಈಡೇರಿಸಿದ್ದೇವೆ. ಗ್ಯಾರಂಟಿ ತರಲು ಆಗಲ್ಲ ಎಂದು ಪ್ರಧಾನಿ ಟೀಕಿಸಿದ್ದರು. ಬಿಜೆಪಿ ಟೀಕಿಸಿತ್ತು. ಆದರೆ ಕೊಟ್ಟ ಎಲ್ಲಾ ಭರವಸೆಯನ್ನ ಈಡೇರಿಸಿದ್ದೇವೆ ಎಂದರು.
1 ಕೋಟಿಗೂ ಹೆಚ್ಚು ಮಹಿಳೆಯರಿಗೆ 2 ಸಾವಿರ ಕೊಡುತ್ತಿದ್ದೇವೆ. ಎಲ್ಲಾ ಮನೆಗಳಿಗೂ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಬಡ ಕುಟುಂಬಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ. ಕರ್ನಾಟಕ ಮಹಿಳೆಯರು ಫ್ರಿಯಾಗಿ ಬಸ್ ನಲ್ಲಿ ಓಡಾಡುತ್ತಿದ್ದಾರೆ. ನಾವು ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನ ಯಶಸ್ವಿಯಾಗಿ ಜಾರಿಗಿಳಿಸಿದ್ದೇವೆ ಎಂದರು.
ಬಿಜೆಪಿಯವರು ಎರಡರಿಂದ ಮೂರು ಕೋಟಾದ್ಯಿಪತಿಗಳ ಪರ ನಿಂತಿದ್ದಾರೆ. ನಿಮ್ಮ ತೆರಿಗೆ ಹಣ ನಿಮ್ಮ ಸೌಕರ್ಯಕ್ಕೆ ಬಳಕೆಯಾಗಬೇಕು ಅನ್ನೋದು ನಮ್ಮ ಉದ್ದೇಶ . ಹಣ ಬಡವರ ಕಷ್ಟಗಳಿಗೆ ಅಗಬೇಕು ಅನ್ನದು ನಮ್ಮ ಉದ್ದೇಶ. ಆದರೆ ಕೆಲ ಉದ್ಯಮಿಗಳಿಗೆ ಕೊಡುವುದು ಬಿಜೆಪಿಯವರ ಉದ್ದೇಶ. ಕೋಟ್ಯಾಧಿಪತಿಗಳು ಹೊರ ದೇಶಗಳಲ್ಲಿ ಆಸ್ತಿ ಖರೀದಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಬಡವರ ಪರ, ಬಿಜೆಪಿ ಯಾವತ್ತೂ ಶ್ರೀಮಂತರ ಪರ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
Key words: congress, successfully, fulfilled ,guarantee, promise, Rahul Gandhi