ಬೆಂಗಳೂರು ,ಮೇ,20,2025 (www.justkannadda.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದ್ದು ಈ ಹಿನ್ನಲೆಯಲ್ಲಿ ಹೊಸೂರು ಹೆದ್ದಾರಿ ಸಂಪೂರ್ಣ ಜಾಮ್ ಆಗಿ ವಾಹನ ಸವಾರರು ಪರದಾಟ ನಡೆಸುತ್ತಿರುವ ಸ್ಥಿತಿ ಉಂಟಾಗಿದೆ.
ಬೆಂಗಳೂರು -ಹೊಸೂರು ಮುಖ್ಯರಸ್ತೆಯ ತಿರುಮಗೊಂಡನಹಳ್ಳಿ ಬಳಿ ಜಾಮ್ ಆಗಿದ್ದು ನಾಲ್ಕು ಗಂಟೆಗಳಿಂದ ವಾಹನಗಳು ನಿಂತಲೇ ನಿಂತಿವೆ. ರಸ್ತೆಯಲ್ಲಿ ನಾಲ್ಕು ಅಡಿ ಮಳೆ ನೀರು ನಿಂತಿದ್ದು, ಭಾರತ್ ಮಾಲಾ ರಸ್ತೆ ನಿರ್ಮಿಸುತ್ತಿರುವವರ ಯಡವಟ್ಟಿನಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಮಗಾರಿ ವೇಳೆ ರಾಜಕಾಲುವೆಗಳಿಗೆ ಮಣ್ಣು ಹಾಕಿರುವವುದರಿಂದ ಹೆದ್ದಾರಿಯಲ್ಲೇ ನೀರು ನಿಂತು ಈ ಅವಾಂತರ ಸೃಷ್ಠಿಯಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದೀಗ ಮಳೆ ನೀರು ನಿಂತ ಹಿನ್ನೆಲೆಯಲ್ಲಿ ವಾಹನಗಳ ಮಳೆ ನೀರಿನಲ್ಲಿ ಸಿಲುಕಿ ಕೆಟ್ಟು ನಿಂತಿವೆ. ಸವಾರರು ಮತ್ತು ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಸ್ಯೆಗೆ ಸ್ಪಂದಿಸಿ ಸರಿಪಡಿಸುವ ಕೆಲಸ ಆಗುತ್ತದೆ- ಸಚಿವ ದಿನೇಶ್ ಗುಂಡೂರಾವ್
ಮಳೆಯಿಂದಾಗಿರುವ ಅವಾಂತರದ ಬಗ್ಗೆ ಆನೇಕಲ್ ನಲ್ಲಿ ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರು ದೊಡ್ಡನಗರ ಕೆಲವು ಭಾಗದಲ್ಲಿ ಈ ರೀತಿಯಾಗುತ್ತೆ. ಮಳೆ ಬಂದಾಗ ಸಮಸ್ಯೆ ಆಗುತ್ತೆ, ಆಗೋದಿಲ್ಲ ಅಂತ ಹೇಳೋಕೆ ಆಗಲ್ಲ. ಆ ಸಮಸ್ಯೆಗೆ ಸ್ಪಂದಿಸಿ ಸರಿಪಡಿಸುವ ಕೆಲಸ ಆಗುತ್ತದೆ. ಆಡಳಿತ ಮಾಡುತ್ತಿರುವುದು ನಾವಾಗಿರುವುದರಿಂದ ಟೀಕೆಗಳನ್ನ ಸ್ವೀಕಾರ ಮಾಡುತ್ತೇವೆ. ಸಮಸ್ಯೆ ಸರಿಪಡಿಸೋ ಕೆಲಸ ಮಾಡುತ್ತೇವೆ ಎಂದರು.
ಬಿಬಿಎಂಪಿ ಮತ್ತು ಇತರೆ ಇಲಾಖೆಗಳಿಂದ ಸಮಸ್ಯೆ ಆಗಿರುವ ಕಡೆ ಸರಿಪಡಿಸಲಾಗುತ್ತೆ. ಪ್ರವಾಹವಾಗಿರೋ ಕಡೆ ಕಾರಣ ಹುಡುಕಿ ಮತ್ತೆ ಆಗದೆ ಇರೋ ಹಾಗೆ ವ್ಯವಸ್ಥೆ ಮಾಡಲಾಗುತ್ತದೆ. ಬಿಜೆಪಿ ಸರ್ಕಾರ ಇದ್ದಂತಹ ಸಂಧರ್ಭದಲ್ಲಿ ಕೂಡ ಈ ರೀತಿ ಸಮಸ್ಯೆ ಎದುರಾಗಿತ್ತು. ಬೋಟ್ ಗಳಲ್ಲಿ ಜನರು ಓಡಾಡುವಷ್ಟು ಸಮಸ್ಯೆ ಆಗಿತ್ತು. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ವೈಜ್ಞಾನಿಕವಾಗಿ ಸಮಸ್ಯೆಯನ್ನ ಬಗೆಹರಿಸುವ ಕೆಲಸ ಮಾಡಲಾಗುತ್ತೆ. ವಿರೋಧಪಕ್ಷವಾಗಿ ಬಿಜೆಪಿಯವರು ಟೀಕೆ ಮಾಡ್ತಾರೆ ಎಂದರು.
Key words: Hosur highway, completely, jammed, heavy rain