ಬೆಂಗಳೂರು,ಮೇ,20,2025 (www.justkannada.in): ಎಲ್ಲಾ ಸರ್ಕಾರಗಳಿದ್ದಾಗಲೂ ಬೆಂಗಳೂರಿನಲ್ಲಿ ಮಳೆಯಿಂದಾಗಿ ಸಮಸ್ಯೆಗಳುಂಟಾಗಿದೆ . ರಾಜಕಾಲುವೆ ಇತ್ತುವರಿ ತೆರವು ಮಾಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.
ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡು ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಬೆಂಗಳೂರಿನಲ್ಲಿ 130 ಮೀಮೀ ಮಳೆಯಾಗಿದ್ದರಿಂದ ಸಮಸ್ಯೆ ಉಂಟಾಗಿದೆ. ಮಳಗಾಲಕ್ಕೂ ಮುಂಚೆ ಕಾಮಗಾರಿಗಳು ಬೇಗ ಆಗಬೇಕು. ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು ಎಂದರು.
ಎಲ್ಲಾ ಸರ್ಕಾರಗಳಿದ್ದಾಗಲೂ ಸಮಸ್ಯೆಯಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಪೂರ್ವ ಬೆಂಗಳೂರು ಮುಳುಗುತ್ತಿತ್ತು ಎಸ್ ಎಂ ಕೃಷ್ಣ ಸಿಎಂ ಆದ ಮೇಲೆ ಎಷ್ಟೋ ತಡೆಗೋಡೆ ನಿರ್ಮಾಣ ಮಾಡಿಸಿದರು. ಸಿದ್ದರಾಮಯ್ಯ ಬಂದ ಮೇಲೆ 250 ಕಿಮೀ ತಡೆಗೋಡೆ ಮಾಡಿದ್ವಿ. ಬಿಜೆಪಿಯವರು ಸುಮ್ಮನೇ ಏನೇನೋ ಮಾತನಾಡಬಾರದು. ಎಲ್ಲೆಲ್ಲಿ ನೀರು ನಿಲ್ಲುತ್ತೆ ಅಂಡರ್ ಗ್ರೌಂಡ್ ಪೈಪ್ ಹಾಕಬೇಕು ಎಂದು ರಾಮಲಿಂಗರೆಡ್ಡಿ ತಿಳಿಸಿದರು.
Key words: Bengaluru rains, problem, all governments, Minister, Ramalingareddy