ಮೈಸೂರು,ಮೇ,19,2025 (www.justkannada.in): ರಾಜ್ಯದಲ್ಲಿರುವುದು ವಸೂಲಿ , ಕಮಿಷನ್ ಸರ್ಕಾರ. ಬೆಲೆ ಏರಿಕೆ ಭ್ರಷ್ಟಾಚಾರವೇ ಇವರ ಸಾಧನೆ ಎಂದು ಮಾಜಿ ಸಚಿವ ಸಿ.ಎನ್ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಚಾರ್ಜ್ ಶೀಟ್ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ಸಿ ಎನ್ ಅಶ್ವಥ್ ನಾರಾಯಣ್, 2 ವರ್ಷದ ಹಿಂದೆ ಬಹಳಷ್ಟು ನಿರೀಕ್ಷೆಯೊಂದಿಗೆ ರಾಜ್ಯದ ಜನರು ಕಾಂಗ್ರೆಸ್ ಪಾರ್ಟಿಗೆ ಅಧಿಕಾರ ನೀಡಿದರು. ಕಳೆದೆರಡು ವರ್ಷದಲ್ಲಿ ರಾಜ್ಯದ ಜನರ ಬದುಕನ್ನು ಬರ್ಬಾದ್ ಮಾಡಲಾಗಿದೆ. ಎರಡು ವರ್ಷ ಪೂರೈಸಿದ್ದರಿಂದ ಸಾಧನಾ ಸಮಾವೇಶ ಮಾಡಲು ಮುಂದಾಗಿದ್ದಾರೆ. ಸಿಎಂ ಹಾಗೂ ಸಚಿವರನ್ನು ಹೊರತುಪಡಿಸಿದರೆ ಬೇರೆ ಯಾರು ಕೂಡ ಸಂತೋಷವಾಗಿಲ್ಲ. ಇದು ವಸೂಲಿ ಸರ್ಕಾರ, ಭ್ರಷ್ಟ ಸರ್ಕಾರ, ಕಮೀಷನ್ ಸರ್ಕಾರ, ಕೆಲವೆಡೆ 60% ಮತ್ತೆ ಕೆಲವೆಡೆ 100% ವಸೂಲಿ ಮಾಡೋ ಸರ್ಕಾರ, ಅಲ್ಪಸಂಖ್ಯಾತರ ತುಷ್ಠೀಕರಣ ಎಂಬುದು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಕರೆಯಬಹುದು ಎಂದು ಕುಟುಕಿದರು.
ಅಭಿವೃದ್ಧಿ ಶೂನ್ಯ ಸೇರಿದಂತೆ ಹಲವಾರು ರಂಗಗಳಲ್ಲಿ ವಿಫಲವಾಗಿರುವುದೇ ಇವರ ಸಾಧನೆಯಾ? ಬೆಲೆ ಏರಿಕೆ ಭ್ರಷ್ಟಾಚಾರ ಇವರ ಸಾಧನೆಯಾಗಿದೆ. ಯುದ್ದಕ್ಕೆ ಮುನ್ನಾ ಯುದ್ದ ಮಾಡ್ಬೇಡಿ ಎನ್ನೋದು. ಕದನ ವಿರಾಮ ಘೋಷಣೆಯಾದರೆ ಯುದ್ದ ಮಾಡಿ ಅನ್ನೋದು ಇವರ ಧೋರಣೆಯಾಗಿದೆ. ಇವರು ದೇಶಕ್ಕೆ ಅಗೌರವ ತರುವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಶ್ವಥ್ ನಾರಾಯಣ್ ಹರಿಹಾಯ್ದರು.
Key words: Commission, Government,, Corruption, achievement, Ashwath Narayan