ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷರಾಗಿ ಆರ್.ಟಿ.ವಿಠ್ಠಲಮೂರ್ತಿ ಆಯ್ಕೆ

ಬೆಂಗಳೂರು,ಮೇ,19,2025 (www.justkannada.in): ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಅವರು ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಕೆ.ಎನ್.ನಿರಂಜನ್  (ಟೈಮ್ಸ್ ಆಫ್ ಇಂಡಿಯಾ)ಪ್ರಧಾನ ಕಾರ್ಯದರ್ಶಿಗಳಾಗಿ ಹೆಚ್.ವಿ.ಕಿರಣ್(ಟಿವಿ 9)ಆಯ್ಕೆಯಾಗಿದ್ದಾರೆ.

ಜಂಟಿ ಕಾರ್ಯದರ್ಶಿಯಾಗಿ ಆರ್.ಹೆಚ್.ನಟರಾಜ್,ಖಜಾಂಚಿಯಾಗಿ ಶಿವಣ್ಣ(ಈ ಸಂಜೆ)  ಅಯ್ಕೆಯಾಗಿದ್ದರೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೈಯ್ಯದ್ ಪೀರ್ ಷಾಷಾ ಖಾದ್ರಿ(ಡೈಲಿ ಸಾಲಾರ್) ಕೆ.ಎಂ.ಶಿವರಾಜು(ಮೈಸೂರು ಮಿತ್ರ),ಸೋಮಶೇಖರ್(ಇಂದು ಸಂಜೆ) ಜಿ.ಚಂದ್ರಶೇಖರ್ ಬಿ.ಟಿ.ರಮ್ಯಾ, ಸೈಯ್ಯದ್  ಪೀರ್ ಪಾಷಾ ಖಾದ್ರಿ(ಡೈಲಿ ಸಾಲಾರ್) ಅವರು ಆಯ್ಕೆಯಾಗಿದ್ದಾರೆ.

ಮೇ 18 ರಂದು ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ಕೂಟದ ಸರ್ವ ಸದಸ್ಯರ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಹೆಸರುಗಳನ್ನು ಪ್ರಕಟಿಸಲಾಯಿತು.

Key words: R.T. Vithalamurthy, elected, president,  Bangalore Reporters’ Association