ದೇಶಕ್ಕೆ ಸಂಕಷ್ಟ ಬಂದಾಗ ದೇಶದ ಜೊತೆ ಕಾಂಗ್ರೆಸ್ ನಿಲ್ಲಲ್ಲ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು,ಮೇ,17,2025 (www.justkannada.in): ಅಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆಯೇ ಕದನ ವಿರಾಮಕ್ಕೆ ಒಪ್ಪಿದ ಕೇಂದ್ರ ಸರ್ಕಾರದ ನಡೆ ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,  ದೇಶಕ್ಕೆ ಸಂಕಷ್ಟ ಬಂದಾಗ ದೇಶದ ಜೊತೆ ಕಾಂಗ್ರೆಸ್ ನಿಲ್ಲಲ್ಲ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ರಕ್ತ ದೇಶ ವಿರೋಧಿ ರಕ್ತ. ಅಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಕಾಂಗ್ರೆಸ್ ನವರು ಜೋಕ್ ಮಾಡುತ್ತಿದ್ದಾರೆ. ಕಾಂಗ್ರೆಸ್ ದೇಶದ ಜೊತೆ ನಿಲ್ಲಬೇಕಿತ್ತು. ಸೇನೆಗೆ ಅವರ ಬೆಂಬಲ ಕೊಡಬೇಕಿತ್ತು. ಇಲ್ಲವೇ ಕಾಂಗ್ರೆಸ್ ನಾಯಕರು ಬಾಯಿ ಮುಚ್ಚಿಕೊಂಡು ಇರಬೇಕಿತ್ತು. ಪಾಕ್ ಸರ್ಕಾರ ಉಗ್ರರ ಕುಟುಂಬಗಳಿಗೆ ಪರಿಹಾರ ಕೊಟ್ಟಿದೆ.  ಇದನ್ನು ನೋಡಿಯಾದರೂ ಕಾಂಗ್ರೆಸ್ ನವರು ಸುಮ್ಮನಿರಬೇಕಿತ್ತು  ದೇಶಕ್ಕೆ ಸಂಕಷ್ಟ ಬಂದಾಗ ಕಾಂಗ್ರೆಸ್ ದೇಶದ ಜೊತೆ ನಿಲ್ಲಲ್ಲ ಕಾಂಗ್ರೆಸ್ ನಾಯಕ ವಿದೇಶಕ್ಕೆ ಹೋಗಿ ಭಾರತದ ವಿರುದ್ದ ಮಾತನಾಡುತ್ತಾರೆ. ಕೇಂದ್ರ ಸರ್ಕಾರವನ್ನ ತೆಗೆಯುವುದು ಹೇಗೆ ಎಂದು ಚರ್ಚಿಸುತ್ತಾರೆ. ಕಾಂಗ್ರೆಸ್ ಮಾನಸಿಕತೆ ದೇಶದ ಜನರಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ  ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ,  ಮಂಜುನಾಥ್ ನಾಲಿಗೆಗೂ ಮೆದಳಿಗೂ ಸಂಪರ್ಕ ಇಲ್ಲ.  ಕಾಂಗ್ರೆಸ್  ಪಕ್ಷದಲ್ಲಿ ಇಂತವರು ಹಲವರಿದ್ದಾರೆ. ಕೆಲವರು ಟೋಪಿಯನ್ನ ಉಲ್ಟಾ ಹಾಕಿಕೊಳ್ಳುತ್ತಾರೆ ಎಂದು ಟೀಕಿಸಿದರು.

Key words: Congress, not stand, country, Union Minister, Shobha Karandlaje