ಇಬ್ಬರು  ಶಂಕಿತ ಉಗ್ರರನ್ನು ಬಂಧಿಸಿದ NIA

ಮುಂಬೈ,ಮೇ,17,2025 (www.justkannada.in):  ಮುಂಬೈ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಬ್ಬರು ಶಂಕಿತ ಉಗ್ರರನ್ನ ಬಂಧಿಸಿದೆ.

ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ಡಯಾಪರ್‌ ವಾಲಾ ಮತ್ತು ತಲ್ಹಾ ಖಾನ್ ಬಂಧಿತ ಶಂಕಿತ ಉಗ್ರರು. ಇಬ್ಬರು ಐಸಿಸ್ ಭಯೋತ್ಪಾದಕರು ಎಂದು ಹೇಳಲಾಗುತ್ತಿದೆ. ಇಂಡೋನೇಷ್ಯಾದ ಜಕಾರ್ತಾದಿಂದ ಭಾರತಕ್ಕೆ ಮರಳಲು  ಆಗಮಿಸುತ್ತಿರುವಾಗ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟಿ -2 ರಿಂದ ಇಬ್ಬರನ್ನೂ ಎನ್ ಐಎ  ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರಿಬ್ಬರು ಐಸಿಸ್‌ ನ ಸ್ಲೀಪರ್ ಸೆಲ್‌ಗಳಾಗಿ ಕೆಲಸ ಮಾಡುತ್ತಿದ್ದರು. ಈ ಇಬ್ಬರೂ ಭಯೋತ್ಪಾದಕರು ಕಳೆದ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದವು. ವಿಶೇಷ ಎನ್‌ ಐಎ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಕೂಡ ಹೊರಡಿಸಿತ್ತು. ಆರೋಪಿಗಳಿಬ್ಬರ ತಲೆಗೆ ತಲಾ 3 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿತ್ತು. ಇದೀಗ ಎನ್ ಐಎ ತಂಡ ಇಬ್ಬರನ್ನು ಬಂಧಿಸಿದೆ.

Key words: NIA, arrests, two suspected, terrorists