ಪಾಕ್‌ ಪರ ಘೋಷಣೆ ಕೂಗಿದ್ದ ಟೆಕ್ಕಿಯ ಬಂಧನ

ಬೆಂಗಳೂರು, ಮೇ 14,2025 (www.justkannada.in):  ಆಪರೇಷನ್‌ ಸಿಂಧೂರ್‌ ಯಶಸ್ಸಿನ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಟೆಕ್ಕಿಯನ್ನು ಬೆಂಗಳೂರಿನ ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್‌ ಲೇಔಟ್‌ ನ ಪಿಜಿವೊಂದರಲ್ಲಿ ನೆಲೆಸಿದ್ದ ಛತ್ತೀಸ್‌‍ಗಡ ಮೂಲದ ಶುಭಾಂಶು ಶುಕ್ಲಾ (25) ಬಂಧಿತ ಟೆಕ್ಕಿ. ಈತ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿದ್ದು,  ಕಟ್ಟಡದ ಬಾಲ್ಕನಿಯಲ್ಲಿ ನಿಂತುಕೊಂಡು ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಎನ್ನಲಾಗಿದೆ.

ಪಿಜಿಯ ಕೊಠಡಿಯೊಂದರಲ್ಲಿ ಶುಭಾಂಶು ಶುಕ್ಲಾ ತನ್ನ ಸ್ನೇಹಿತನ ಜೊತೆ ವಾಸವಾಗಿದ್ದು, ಮೇ 9 ರಂದು ಮಧ್ಯರಾತ್ರಿ 12.30ರ ವೇಳೆಯಲ್ಲಿ ಪಿಜಿಯಲ್ಲಿದ್ದ ಹಲವು ಯುವಕರು ಸೇರಿಕೊಂಡು ಆಪರೇಷನ್‌ ಸಿಂಧೂರ್‌ ಯಶಸ್ಸಿನ ಸಂಭ್ರಮಾಚರಣೆ ಮಾಡುತ್ತಿದ್ದರು. ಈ ಸಮಯದಲ್ಲಿ ಬಾಲ್ಕನಿಯಲ್ಲಿ ನಿಂತು ಶುಭಾಂಶು ಶುಕ್ಲಾ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎನ್ನಲಾಗಿದೆ.

ಸಂಭ್ರಮಾಚರಣೆಯಲ್ಲಿದ್ದ ಯುವಕರು ತಕ್ಷಣ ಕಂಟ್ರೋಲ್‌ ರೂಂಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಶುಭಾಂಶು ಶುಕ್ಲಾನನ್ನು ವಶಕ್ಕೆ ಪಡೆದಿದ್ದಾರೆ.

Key words: Techie, arrested ,shouting, pro-Pakistan, slogans