ಇನ್ಮುಂದೆ ರಾಜ್ಯ ಸರ್ಕಾರದಿಂದಲೇ 108 ಆ್ಯಂಬುಲೆನ್ಸ್ ಕಾರ್ಯ ನಿರ್ವಹಣೆ -ಸಚಿವ ದಿನೇಶ್ ಗುಂಡೂರಾವ್ ಘೋಷಣೆ

ಬೆಂಗಳೂರು,ಮೇ,14,2025 (www.justkannada.in): ಇನ್ಮುಂದೆ ರಾಜ್ಯ ಸರ್ಕಾರವೇ 108 ಆ್ಯಂಬುಲೆನ್ಸ್ ಕಾರ್ಯ ನಿರ್ವಹಿಸುತ್ತದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಘೋಷಣೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಯಾವುದೇ ಏಜೆನ್ಸಿ ಮೂಲಕ 108 ಆ್ಯಂಬುಲೆನ್ಸ್ ಕಾರ್ಯ ನಿರ್ವಹಿಸಲ್ಲ, ಸರ್ಕಾರವೇ 108 ಆ್ಯಂಬುಲೆನ್ಸ್ ಸರ್ವೀಸ್ ನೀಡುತ್ತದೆ ಎಂದು ಹೇಳಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಮಂಡಳಿಗೆ  ಹರೀಶ್ ಇಂಜಾಡಿ  ಆಯ್ಕೆಯ ಆಕ್ಷೇಪ ವ್ಯಕ್ತವಾಗಿದ್ದು ಈ ಕುರಿತು ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ನಾನು ಯಾರಿಗೂ ಶಿಫಾರಸು ಮಾಡಿಲ್ಲ. ಚುನಾವಣೆ ಮೂಲಕವೇ ಹರೀಶ್ ಇಂಜಾಡಿ ಆಯ್ಕೆಯಾಗಿರುವುದು.  ಇದರ ಬಗ್ಗೆ ಮುಜರಾಯಿ ಸಚಿವರ ಜೊತೆ ಮಾತನಾಡುತ್ತೇನೆ.   ನಿಯಮ ಪ್ರಕಾರ ಹರೀಶ್ ನನ್ನು ಬದಲಾವಣೆ ಮಾಡಲು ಆಗಲ್ಲ. 3 ವರ್ಷ ಅಧಿಕಾರಾವಧಿ ಇರುತ್ತೆ ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.

Key words: state government, 108 ambulance, service, Minister, Dinesh Gundu Rao