ರಾಜ್ಯದ ಪೊಲೀಸರ ಹೆಚ್ಚುವರಿ ರಜೆ ರದ್ದು: ಗೃಹ ಸಚಿವ ಡಾ. ಜಿ.ಪರಮೇಶ್ವರ್‌

ಬೆಂಗಳೂರು,ಮೇ,10,2025 (www.justkannada.in):  ಪಹಲ್ಗಾಮ್ ಮೇಲೆ ಉಗ್ರರ ದಾಳಿ ಬಳಿಕ ಉಗ್ರರ 9 ನೆಲೆಗಳನ್ನ ಭಾರತೀಯ ಸೇನೆ ಧ್ವಂಸ ಮಾಡಿದ ಬೆನ್ನಲ್ಲೆ ಭಾರತ ಮತ್ತು ಪಾಕ್‌ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೂಡ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದ್ದು ರಾಜ್ಯದ ಪೊಲೀಸರ ಹೆಚ್ಚುವರಿ ರಜೆ ರದ್ದುಗೊಳಿಸಲಾಗಿದೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ , ದೇಶದಲ್ಲಿ ಯುದ್ದದ ಪರಿಸ್ಥಿತಿ ಹಿನ್ನೆಲೆ ರಾಜ್ಯದ ಪೊಲೀಸರಿಗೂ ಹೆಚ್ಚುವರಿ ರಜೆ ರದ್ದು ಮಾಡಲಾಗಿದೆ.  ಈ ಸಂದರ್ಭದಲ್ಲಿ ಪೊಲೀಸರಿಗೆ ಹೆಚ್ಚುವರಿ ರಜೆ ಇರುವುದಿಲ್ಲ ಯಾವ ಸಂದರ್ಭದಲ್ಲಿ ಏನಾಗುತ್ತೋ ಗೊತ್ತಿಲ್ಲ.  ಹಾಗಾಗಿ ಪೊಲೀಸರಿಗೆ ಹೆಚ್ಚುವರಿ ರಜೆ ಇರುವುದಿಲ್ಲ ಎಂದಿದ್ದಾರೆ

ಕೋಸ್ಟಲ್‌ ಗಾರ್ಡ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

Key words: Additional leave, state ,police, canceled