ಬೆಂಗಳೂರು,ಮೇ,6,2025 (www.justkannada.in): ಭಾರತೀಯರಿಗೆ ಹೊರಗಿನ ಶತ್ರುಗಳ ಬಗ್ಗೆ ಭಯ ಇಲ್ಲ ಒಳಗಿನ ದ್ರೋಹಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ, 1962ರಲ್ಲಿ ನಡೆದ ಯುದ್ದ ಒಂದನ್ನು ಹೊರತುಪಡಿಸಿ ಉಳಿದ ಯುದ್ದಗಳಲ್ಲೆಲ್ಲಾ ನಮ್ಮ ಸಾಮರ್ಥ್ಯ ಏನೆಂದು ತೋರಿಸಿದ್ದೇವೆ 1962ರಲ್ಲಿ ಅಂದಿನ ಪ್ರಧಾನಿ ಮೂರ್ಖತನದಿಂದ ನಮ್ಮ ಸೈನಿಕರನ್ನ ಬಲಿಕೊಡುವ ಸಂದರ್ಭ ಬಂತು. ಈಗ ಹೊರಗಿನ ಶತ್ರುಗಳಿಗಿಂತ ಒಳಗಿನ ದ್ರೋಹಿಗಳ ಬಗ್ಗೆ ಎಚ್ಚರಿಕೆಯನ್ನ ವಹಿಸಬೇಕು ಎಂದರು.
ಕೆಪಿಎಸ್ ಸಿ ಮುಖ್ಯಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಪ್ರತಿಕ್ರಿಯಿಸಿದ ಎಂಎಲ್ ಸಿ ಸಿ.ಟಿ ರವಿ, ಇವರ ಯೋಗ್ಯತೆಗೆ ಒಂದು ಪರೀಕ್ಷೆಯನ್ನೂ ನಡೆಸಲು ಆಗಲ್ಲ. ಮಾತೆತ್ತಿದ್ದರೇ ಭದ್ರತೆ ವೈಪಲ್ಯ, ಅಂತರಾಷ್ಟ್ರಿಯ ವೈಪಲ್ಯ ಅಂತಾರೆ. ಕಾಂಗ್ರೆಸ್ ಬರೀ ಸೋರಿಕೆ ಸೋರಿಕೆ. ಇವರಿಗೆ ಒಂದು ಪರೀಕ್ಷೆಯನ್ನೂ ಪಾರದರ್ಶಕವಾಗಿ ನಡೆಸಲು ಆಗಲ್ಲ ಎಂದು ಟೀಕಿಸಿದರು.
Key words: Indians, external, enemies, MLC, C.T. Ravi