ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ಶಿವಾನಂದ್ ಪಾಟೀಲ್ ರಾಜೀನಾಮೆ: ಯತ್ನಾಳ್ ಪ್ರತಿಕ್ರಿಯೆ ಏನು..?

ದಕ್ಷಿಣ ಕನ್ನಡ,ಮೇ,2,2025 (www.justkannada.in):  ತಾನು ಹಾಕಿದ್ದ ಸವಾಲನ್ನ ಸ್ವೀಕರಿಸಿ ಸಚಿವ ಶಿವಾನಂದ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ರಾಜೀನಾಮೆ ಕೊಡುವವನು ಯಾವತ್ತೂ ಕಂಡೀಷನ್ ಹಾಕಲ್ಲ ಮಂಗಳೂರು.  ಎರಡು ಲೈನ್ ನಲ್ಲಿ ರಾಜೀನಾಮೆ ಪತ್ರ ಬರೆದು ಸಲ್ಲಿಸುತ್ತಾರೆ.  ಕಂಡಿಷನ್ ಹಾಕಿ ರಾಜೀನಾಮೆ ಕೊಡುವುದು ಮೂರ್ಖತನ . ಇಷ್ಟು ಉದ್ದ ರಾಜೀನಾಮೆ ಪತ್ರ ಬರೆದು ಎಂದಾದ್ರೂ ಕೊಟ್ಟಿದ್ದಾರಾ..?  ಶಿವಾನಂದ್ ಪಾಟೀಲ್ ಗೆ ಮಾನ ಮರ್ಯಾದೆ ಏನು ಇಲ್ಲ ಅವರದ್ದು ದಡ್ಡತನ.  ಮರ್ಯಾದೆ ಇಲ್ಲದವರು ಮಾಡುವ ಕೆಲಸವನ್ನ ಪಾಟೀಲ್ ಮಾಡಿದ್ದಾರೆ ಎಂದು ಕಿಡಿಕಾರಿದರು.

ಹಾಗೆಯೇ ನಾನು ನನ್ನ ನಿರ್ಧಾರವನ್ನ ಶುಕ್ರವಾರ ತಿಳಿಸುತ್ತೇನೆ ಎಂದು ಶಾಸಕ ಯತ್ನಾಳ್ ಹೇಳಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನನ್ನ ವಿರುದ್ದ ಸ್ಪರ್ಧಿಸಿ ಗೆಲ್ಲಲಿ  ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಕಿದ್ದ​ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ಸಚಿವ ಶಿವಾನಂದ ಪಾಟೀಲ್ ರಾಜೀನಾಮೆ ನೀಡಿದ್ದು ಯತ್ನಾಳ್ ಮುಂದೆ ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಕಾದು ನೋಡಬೇಕಿದೆ.

Key words: Shivanand Patil, resigns, MLA, post, Basana gowada patil Yatnal