ಮೈಸೂರು,ಮೇ,2,2025 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮಾರಿಯಮ್ಮ ನವರ 101ನೇ ವರ್ಷದ ಮೈಸೂರು ಕರಗ ಮಹೋತ್ಸವ ನಡೆಯುತ್ತಿದೆ.
ಇಟ್ಟಿಗೆಗೂಡಿನ ಶ್ರೀ ರೇಣುಕಾದೇವಿ ಕರದ ದೇವಸ್ಥಾನದ ಟ್ರಸ್ಟ್ (ರಿ.) ವತಿಯಿಂದ ಮೂರು ದಿನಗಳ ಕಾಲ ಈ ಕರಗ ಮಹೋತ್ಸವ ನಡೆಯುತ್ತಿದ್ದು ಇಂದು ಬೆಳಿಗ್ಗೆ 7 ಘಂಟೆಗೆ ಅಮ್ಮನವರ ಕರಗವು ದೇವಸ್ಥಾನದಿಂದ ಹೊರಟು ‘ಜೂ ಗಾರ್ಡನ್ ಮುಖ್ಯ ರಸ್ತೆ, ಮಾರ್ಗವಾಗಿ ಕಮ್ಮಾಳ ಗೇರಿ, ಬಸವಣ್ಣ ಬೀದಿ ಕಡೆಯಿಂದ ಶ್ರೀ ಸಿದ್ದಪ್ಪಾಜಿ ದೇವಸ್ಥಾನ, ಅರುಣಾಚಲಂ ರಸ್ತೆ, ಸರ್ಕಾರಿ ಆಸ್ಪತ್ರೆ ರಸ್ತೆ, ಶ್ರೀ ಕುಪ್ಪಮ್ಮ ದೇವಸ್ಥಾನ, ಪೆರಿತಂಬಿ ರಸ್ತೆ, ಸುಬ್ಬರಾಯನಾಯ್ಡು ರಸ್ತೆಯಿಂದ ಶ್ರೀ ನಾಗಲಕ್ಷ್ಮಿ ಅಮ್ಮನವರ ದೇವಸ್ಥಾನದವರೆಗೆ ಸಂಚರಿಸಿ ಭಕ್ತಾದಿಗಳ ಪೂಜೆ ಸ್ವೀಕರಿಸಿ ದೇವಸ್ಥಾನ ತಲುಪಿತು. ಬಳಿಕ ಮಹಾಮಂಗಳಾರತಿ ನೆರವೇರಿಸಲಾಗುತ್ತಿದೆ.
ನಾಳೆ ರಾತ್ರಿ 8 ಘಂಟೆಗೆ ಕರಗ ಅದ್ದೂರಿ ಮೆರವಣಿಗೆ ನಡೆಯಲಿದೆ. ಈ ಹಿಂದೆ ಮೊದಲು ಒಂದೇ ದಿನ ಒಂದು ಕಡೆ ಮಾತ್ರ ಕರಗ ಮಹೋತ್ಸವ ನಡೆಯುತ್ತಿತ್ತು. ಇದೀಗ ಈ ಬಾರಿ ಮೂರು ದಿನಗಳ ಕಾಲ ಎಲ್ಲಾ ಮನೆಗಳಲ್ಲು ಕರಗ ಕೂರಿಸಿ ಪೂಜೆ ಮಾಡುವ ಮೂಲಕ ಕರಗ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ.
Key words: Sri Chamundeshwari, Sri Mariyamma, Karaga Mahotsav, Mysore