ಮೈಸೂರು,ಮೇ,1,2025 (www.justkannada.in): ವಿದ್ಯಾರ್ಥಿಗಳ ಭವಿಷ್ಯದ ಹಾದಿಗೆ ಮಾರ್ಗದರ್ಶಿಯಾದ ‘ದಿ ಹಿಂದೂ ಎಜುಕೇಶನ್ ಪ್ಲಸ್ ಕೆರಿಯರ್ ಕೌನ್ಸೆಲಿಂಗ್’ 23ನೇ ಆವೃತ್ತಿಯು ರಾಜ್ಯಾದ್ಯಂತ ವಿವಿಧೆಡೆ ಆರಂಭಗೊಂಡಿದೆ. ಮೈಸೂರಿನಲ್ಲಿ ಮೇ 3 ರ ಶನಿವಾರ ಬೆಳಗ್ಗೆ 9.30 ಕ್ಲೇ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಸಾಹುಕಾರ್ ಚನ್ನಯ್ಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಗ್ಗೆ 9 ಗಂಟೆಯಿಂದ ವಿದ್ಯಾರ್ಥಿಗಳ ನೋಂದಣಿ ಆರಂಭವಾಗಲಿದ್ದು, ವೈದ್ಯಕೀಯ, ಎಂಜಿನಿಯರಿಂಗ್, ಸಹಿತ ವೃತ್ತಿಪರ ಕೋರ್ಸ್ ಗಳು, ಸಿಇಟಿ, ನೀಟ್, ಸಿಎ, ಸಿಎಸ್ ನಂತಹ ಪ್ರವೇಶ ಪರೀಕ್ಷೆಗಳು, ವಿಜ್ಞಾನ, ಕಲಾ, ಕಾಮರ್ಸ್ ಹಾಗೂ ಕಾನೂನು, ಹೀಗೆ ವಿವಿಧ ಪದವಿ ಮತ್ತಿತರ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್, IAS ಆಗಮಿಸಲಿದ್ದಾರೆ.
ಯುಪಿ.ಎಸ್.ಸಿ ಕುರಿತು ಮಾತನಾಡಲು 2025 ನೆ ಸಾಲಿನ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಆಲ್ ಇಂಡಿಯಾ 906 ರಾಂಕ್ ಪಡೆದ ವಿನುತ ಜಿ.ಆರ್, ಚಾರ್ಟೆಡ್ ಅಕೌಂಟೆಂಸಿ ಕುರಿತು ಮಾತನಾಡಲು ಮೈಸೂರಿನ ವಿಭಾಗದ ಆಲ್ ಇಂಡಿಯಾ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸಿ. ಎ . ಭಾರ್ಗವ ಎಸ್, ಇಂಜಿನಿಯರಿಂಗ್ ಶಿಕ್ಷಣ ಕುರಿತು ಮಾತನಾಡಲು ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ, ವೈದ್ಯಕೀಯದ ಶಿಕ್ಷಣ ಕುರಿತು ಮಾತನಾಡಲು ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಕಮ್ಯುನಿಟಿ ಮೆಡಿಕಲ್ ವಿಭಾಗದ ಮುಖ್ಯಸ್ಥ ಡಾ.ಎಸ್.ಎನ್. ಮಂಜುನಾಥ್, ಸಿ.ಇ.ಟಿ ಕೌನ್ಸೆಲಿಂಗ್ ಕುರಿತು ಮಾಹಿತಿ ನೀಡಲು ಉದಯ್ ಶಂಕರ್ ನೋಡಲ್ ಆಫಿಸರ್, ಕೆ.ಇ.ಎ ಹೆಲ್ಪಲೈನ್ ವಿಭಾಗ ಹಾಗೂ ಇನ್ನಿತರ ಶಿಕ್ಷಣ ಅವಕಾಶಗಳ ಕುರಿತು ಸಿಗ್ಮಾ ಸಂಸ್ಥೆಯ ಮುಖ್ಯಸ್ಥ ಆಮೀನ್ ಈ ಮುದ್ದಾಸೀರ್ ಅವರು ಮಾರ್ಗದರ್ಶನ ನೀಡಲು ಆಗಮಿಸಲಿದ್ದಾರೆ.
ದ್ವಿತೀಯ ಪಿಯುಸಿ ಪಾಸಾದ ಹಾಗು ಓದುತ್ತಿರುವ ಈ ಕೆರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುವ ಕೆರಿಯರ್ ಕೌನ್ಸೆಲಿಂಗ್ ನ ಸೂಕ್ತ ಮಾರ್ಗದರ್ಶನದಿಂದಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಸರಿಯಾದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗಲಿದೆ. ಹೆಚ್ಚಿನ ಮಾಹಿತಿಗೆ ಬಿ. ರಾಜೇಶ್ – 9448871815 ಸಂಪರ್ಕಿಸಬಹುದಾಗಿದೆ.
Key words: Mysore, ‘The Hindu Education Plus Career Counseling, Guide, Students