Wednesday, September 30, 2026

BDA Apartments

ಮೈಸೂರು: ಐದು ಮೈಕ್ರೋ ಫೈನಾನ್ಸ್ ಗಳ ವಿರುದ್ಧ FIR ದಾಖಲು BDA JK_Adv BDA Adv
Home Crime ಮೈಸೂರು: ಐದು ಮೈಕ್ರೋ ಫೈನಾನ್ಸ್ ಗಳ ವಿರುದ್ಧ FIR ದಾಖಲು

ಮೈಸೂರು: ಐದು ಮೈಕ್ರೋ ಫೈನಾನ್ಸ್ ಗಳ ವಿರುದ್ಧ FIR ದಾಖಲು

ಮೈಸೂರು,ಜನವರಿ,27,2025 (www.justkannada.in): ಸಿಎಂ ಸಿದ್ದರಾಮಯ್ಯ ಅವರ ಅಭಯದ ನಡುವೆಯೂ ಮೈಕ್ರೋ ಫೈನಾನ್ಸ್ ಹಾವಳಿಗೆ ನಂಜನಗೂಡು ತಾಲ್ಲೂಕಿನಲ್ಲಿ ಎರಡು ಜೀವಗಳು ಬಲಿಯಾಗಿದ್ದು ಈ ಮಧ್ಯೆ ಇದೀಗ  ನಂಜನಗೂಡಿನ ಐದು ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.ಮೈಸೂರು nypunya1

ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ ಎಂಬುವವರು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಹಿನ್ನೆಲೆ ನಂಜನಗೂಡಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಕ್ರೋ ಫೈನಾನ್ಸ್ ನ ಇನ್ನಷ್ಟು ಸಂಘಗಳ ಮೇಲೆ ಎಫ್ ಐಆರ್ ದಾಖಲಾಗು  ಸಾಧ್ಯತೆ ಇದೆ.

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ 53 ವರ್ಷದ ಜಯಶೀಲ ಔಷಧಿ ಸೇವಿಸಿ ಸಾವನ್ನಪ್ಪಿದ್ದರೇ ‌  ಮಾಲ್ಕುಂಡಿ ಗ್ರಾಮದ 32 ವರ್ಷದ ಕೃಷ್ಣಮೂರ್ತಿ ಎಂಬುವವರು ಮನೆಯಲ್ಲಿಯೇ ನೇಣಿಗೆ  ಶರಣಾಗಿದ್ದರು.

ಜಯಶೀಲ ಮಹಿಳಾ ಸ್ವಸಹಾಯ ಸಂಘಗಳಲ್ಲಿ‌ ಐದು ಲಕ್ಷ‌ಸಾಲ‌ ಮಾಡಿದ್ರೆ, ಕೃಷ್ಣಮೂರ್ತಿ,  ಧರ್ಮಸ್ಥಳ ಮಹಿಳಾ ಸ್ವಸಹಾಯ ಸಂಘ, ಉಜ್ಜೀವನ್ ಫೈನಾನ್ಸ್ ಸೇರಿ ಐದು ಕಡೆ ನಾಲ್ಕು ಲಕ್ಷ ಸಾಲ ಪಡೆದಿದ್ದರು.

ಇಬ್ಬರು ಮೃತರು ತಮ್ಮ ಕುಟುಂಬ ನಿರ್ವಹಣೆಗೆ ಸಾಲ ಮಾಡಿ, ಸಾಲ ತೀರಿಸಲಾಗದೆ ಸಾವನ್ನಪ್ಪಿದ್ದರು. ಹೀಗಾಗಿ ಈ‌ ಸಾವುಗಳಿಗೆ ಮೈಕ್ರೋ ಫೈನಾನ್ಸ್ ಗಳೇ ಕಾರಣ ಎಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ, ನಂಜನಗೂಡಿನ ಸರ್ಕಾರಿ‌ ಆಸ್ಪತ್ರೆ ಶವಾಗಾರದ ಬಳಿ ಪ್ರತ್ಯೇಕ ಪ್ರತಿಭಟನೆಗಳು ನಡೆದವು.

ಇದನ್ನ ಗಮನಿಸಿದ ಶಾಸಕ ದರ್ಶನ್ ಧ್ರುನಾರಾಯಣ್ ಮೈಕ್ರೋಫೈನಾನ್ಸ್ ಗಳ ವಿರುದ್ಧ ಕಿಡಿಕಾರಿ, ಮುಂದೆ ಇಂತಹ ತಪ್ಪು ನಡೆಯಲು ಬಿಡಲ್ಲ  ಎಂದು ಅಭಯ ನೀಡಿದ್ದರು.  ಇದರ ಬೆನ್ನಲ್ಲೆ ಹುಲ್ಲಹಳ್ಳಿ ಠಾಣಾ ಪೊಲೀಸರು ಧರ್ಮಸ್ಥಳ ಮಹಿಳಾ ಸ್ವಸಹಾಯ ಸಂಘ ಸೇರಿ ‌ಐದು ಖಾಸಗಿ ಫೈನಾನ್ಸ್ ಗಳ ವಿರುದ್ಧ ಎಫ್‌ಐ ಆರ್ ದಾಖಲು ಮಾಡಿದ್ದಾರೆ.

ಅತ್ತ, ಮೊನ್ನೆ ಪಿರಿಯಾಪಟ್ಟಣದಲ್ಲಿ ಮೈಕ್ರೋಫೈನಾನ್ಸ್ ಸಿಬ್ಬಂದಿ ಎದೆಗೆ ಗುಂಡಿಟ್ಟು‌ ಬೆದರಿಸಿದ್ದ‌ ಪ್ರಕರಣ ಸದ್ದು ಮಾಡಿತ್ತು. ಆರೋಪಿಯನ್ನ ಬಂಧಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಸ್ವತಃ ವಿವರಣೆ ಕೇಳಿ ಬೆದರಿಕೆಯೊಡ್ಡಿದ್ದ ಪುನೀತ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಬಳಿಕ ಆತನನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Key words: Mysore, FIR, against, five microfinance