Friday, October 30, 2026

Dasara Wishes

Happy Dasara
Home Front Page ಸಿಎಂ ತವರಲ್ಲಿ ಹೆಣ ಹೂಳಲು ಸ್ಥಳವಿಲ್ಲ…!

ಸಿಎಂ ತವರಲ್ಲಿ ಹೆಣ ಹೂಳಲು ಸ್ಥಳವಿಲ್ಲ…!

ಮೈಸೂರು,ಜನವರಿ,9,2025 (www.justkannada.in): ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳೀಯರು ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬವೊಂದು ಪರದಾಡಿದ ಅಮಾನವೀಯ ಘಟನೆ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ನಡೆದಿದೆ.

ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರ ಕ್ಷೇತ್ರ ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ನಡೆದಿದೆ. ಭೈರಾಪುರ ಪಟ್ಟಣದಲ್ಲಿ ವಾಸವಾಗಿರುವ ಕೊರಚ‌ ಕುಟುಂಬದ ರತ್ನಮ್ಮ ಎಂಬುವವರು ಮೃತಪಟ್ಟಿದ್ದರು.  ಆದರೆ ಇವರ ಮೂಲ ದಾವಣಗೆರೆ ಎಂದು ಸ್ಥಳೀಯರು ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.  ಹೆಣ ಹೂಳಲು ಅವಕಾಶ ಕಲ್ಪಿಸಿಕೊಡದ್ದಕ್ಕೆ ಕುಟುಂಬಸ್ಥರು  ಮೃತದೇಹವನ್ನು ದಾವಣಗೆರೆಗೆ ಕೊಂಡೊಯ್ದಿದ್ದಾರೆ.

ಭೈರಾಪುರ ಪಟ್ಟಣದಲ್ಲಿ ವಾಸವಾಗಿರುವ ಕೊರಚ‌ ಕುಟುಂಬದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟರ್ ಐಡಿ, ವಾಸಸ್ಥಳ ದೃಢೀಕರಣವಿದೆ. ಆದರೆ  ಇಲ್ಲಿ ಮೃತದೇಹ ಹೂಳಲು ಹೊರಟ ವೇಳೆ ಸ್ಥಳೀಯರು ಕಿರಿಕ್ ತೆಗೆದಿದ್ದಾರೆ.  ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಪರಿಶಿಷ್ಟಜಾತಿ , ಪಂಗಡಗಳಿಗೆ ಪ್ರತ್ಯೇಕ ಸ್ಮಶಾನವಿದ್ದು,  ಯಾವ ಸ್ಮಶಾನದಲ್ಲೂ‌ ಅಂತ್ಯಸಂಸ್ಕಾರಕ್ಕೆ ಮುಖಂಡರು ಅವಕಾಶ ಮಾಡಿಕೊಟ್ಟಿಲ್ಲ.

ಈ ಬಗ್ಗೆ  ಜಿಲ್ಲಾಡಳಿತ, ಅಧಿಕಾರಿಗಳು, ರಾಜಕಾರಣಿಗಳು ಜಾಣಮೌನವಾಗಿದ್ದು, ಜಿಲ್ಲಾಡಳಿತಕ್ಕೆ ಕುಟುಂಬದವರು ಹಿಡಿಶಾಪ ಹಾಕಿದ್ದಾರೆ.  ಜನಪ್ರತಿನಿಧಿಗಳ ನಡೆಗೆ ಕುಟುಂಬಸ್ಥರು ಆಕ್ರೋಶಗೊಂಡು ‌ ಶವವನ್ನು ದಾವಣಗೆರೆಗೆ ರವಾನೆ ಮಾಡಿದ್ದಾರೆ.

Key words: funeral, dead body, mysore