Sunday, September 20, 2026

BDA Apartments

ಸೇನಾ ವಾಹನ ಕಂದಕಕ್ಕೆ ಉರುಳಿಬಿದ್ದು ಕರ್ನಾಟಕದ ಮೂವರು ಯೋಧರು ಸೇರಿ ಐವರು ಹುತ...
Home Crime ಸೇನಾ ವಾಹನ ಕಂದಕಕ್ಕೆ ಉರುಳಿಬಿದ್ದು ಕರ್ನಾಟಕದ ಮೂವರು ಯೋಧರು ಸೇರಿ ಐವರು ಹುತಾತ್ಮ

ಸೇನಾ ವಾಹನ ಕಂದಕಕ್ಕೆ ಉರುಳಿಬಿದ್ದು ಕರ್ನಾಟಕದ ಮೂವರು ಯೋಧರು ಸೇರಿ ಐವರು ಹುತಾತ್ಮ

 ಜಮ್ಮುಕಾಶ್ಮೀರ,ಡಿಸೆಂಬರ್,25,2024 (www.justkannada.in):  ಸೇನಾವಾಹನ ಕಂದಕಕ್ಕೆ ಉರುಳಿಬಿದ್ದು ಕರ್ನಾಟಕದ ಮೂವರು ಯೋಧರು ಸೇರಿ ಐವರು ಯೋಧರು ಹುತಾತ್ಮರಾಗಿರುವ ಘಟನೆ ಜಮ್ಮುಕಾಶ್ಮೀರದಲ್ಲಿ ನಡೆದಿದೆ.

ಜಮ್ಮುಕಾಶ್ಮೀರದ ಮೆಂಧರ್ ಸೆಕ್ಟರ್ ನ ಪೂಂಚ್ ಜಿಲ್ಲೆಯ ಬಲ್ನೋಯಿ  ಬಳಿ ಈ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆ ಮುಧೋಳದ ಮಹೇಶ್ ಮಾರಿಕೊಂಡ್, ಉಡುಪಿ ಜಿಲ್ಲೆ ಕುಂದಾಪುರದ ಅನೂಪ್, ಚಿಕ್ಕೋಡಿ ದಯಾನಂದ್ ಮೃತಪಟ್ಟ ಮೂವರು ಯೋಧರು.

ಕರ್ತವ್ಯಕ್ಕೆಂದು ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಸೇನಾವಾಹನ 350 ಅಡಿ ಕಂದಕಕ್ಕೆ ಬಿದ್ದು ಈ ಘಟನೆ ಸಂಭವಿಸಿದೆ. ಹುತಾತ್ಮ ಅನೂಪ್ ಅವರು ಕಳೆದ 13 ವರ್ಷಗಳಿಂದ ಸೇನೆಯಲ್ಲಿದ್ದರು.  ಅವರಿಗೆ 2 ವರ್ಷದ ಪುಟ್ಟಮಗು ಇದೆ.

Key words: three soldiers, Karnataka, death, army vehicle, falls