Saturday, August 1, 2026

BDA Apartments

Home DASARA-2019 ನಾಡಹಬ್ಬ ಮೈಸೂರು ದಸರಾ ಕ್ರೀಡಾಕೂಟದ ಪೋಸ್ಟರ್ ಬಿಡುಗಡೆ: ಕ್ರೀಡಾಪಟುಗಳಿಗೆ ಆಹಾರ ಮತ್ತು ಬಸ್ ವ್ಯವಸ್ಥೆ….

ನಾಡಹಬ್ಬ ಮೈಸೂರು ದಸರಾ ಕ್ರೀಡಾಕೂಟದ ಪೋಸ್ಟರ್ ಬಿಡುಗಡೆ: ಕ್ರೀಡಾಪಟುಗಳಿಗೆ ಆಹಾರ ಮತ್ತು ಬಸ್ ವ್ಯವಸ್ಥೆ….

ಮೈಸೂರು,ಸೆ,28,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು ಈ ನಡುವೆ ಇಂದು ದಸರಾ ಕ್ರೀಡಾಕೂಟದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ನಗರದ  ಚಾಮುಂಡಿವಿಹಾರ ಸ್ಟೇಡಿಯಂನಲ್ಲಿ  ದಸರಾ ಕ್ರೀಡಾ ಸಮಿತಿಯ ಅಧ್ಯಕ್ಷ ಜಗದೀಶ್,  ಹಾಗೂ ಕಾರ್ಯದರ್ಶಿ ಸುರೇಶ್  ದಸರಾ ಕ್ರೀಡಾಕೂಟದ ಪೋಸ್ಟರ್ ಬಿಡುಗಡೆ ಮಾಡಿದರು.

ಈ ಬಾರಿಯ ಅಕ್ಟೋಬರ್ 1 ರಂದು  ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ ಸಿಂಧು ಅವರು ದಸರಾ ಕ್ರೀಡಾಕೂಟ ಉದ್ಘಾಟನೆ ಮಾಡಲಿದ್ದಾರೆ. ನಾಳೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕ್ರೀಡಾ ಜ್ಯೋತಿಗೆ ಚಾಲನೆ ನೀಡಲಿದ್ದಾರೆ. ನಾಳೆಯಿಂದ ಅಕ್ಟೋಬರ್ 6ರವರಗೆ  ನಗರದ 8 ವಿವಿಧ  ಕ್ರೀಡಾ ಮೈದಾನದಲ್ಲಿ ದಸರಾ ಕ್ರೀಡಾಕೂಟ ನಡೆಯಲಿದೆ.

ದಸರಾ ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದ ಕ್ರೀಡಾ ಇಲಾಖೆಯ ಉಪ ನಿರ್ದೇಶಕ  ಸುರೇಶ್,  ಕ್ರೀಡಾಪಟುಗಳಿಗೆ ಸುರಕ್ಷತೆ ಹಿನ್ನೆಲೆ ಮೈಸೂರಿನ ವಿವಿಧೆಡೆ 110 ರೂಮ್ ಗಳನ್ನ ಬುಕ್ಕಿಂಗ್ ಮಾಡಲಾಗಿದ್ದು,  ಆಹಾರ ಹಾಗೂ  ಬಸ್ ಸೌಲಭ್ಯ ಕೂಡ ವ್ಯವಸ್ಥೆ ಮಾಡಲಾಗಿದೆ. ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ  5 ರಿಂದ 6ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಬಾರಿಯ ಕ್ರೀಡಾಕೂಟಕ್ಕೆ  6ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.

Key words: mysore dasara- releases -poster – Dasara Games