Thursday, August 6, 2026

BDA Apartments

Home Front Page ಸಂಪುಟ ಪುನರಚನೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ- ಸಚಿವ ಕೆಎಚ್ ಮುನಿಯಪ್ಪ

ಸಂಪುಟ ಪುನರಚನೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ- ಸಚಿವ ಕೆಎಚ್ ಮುನಿಯಪ್ಪ

 

ಬೆಂಗಳೂರು,ನವೆಂಬರ್,28,2024 (www.justkannada.in): ಸಂಪುಟ ಪುನರಚನೆ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ  ತೀರ್ಮಾನಕ್ಕೆ ಬದ್ಧ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ ಎಚ್ ಮುನಿಯಪ್ಪ, ಸಂಪುಟ ಪುನರಚನೆ ವಿಚಾರದಲ್ಲಿ ನನ್ನ ಹೇಳಿಕೆಗೆ ನಾನು ಬದ್ದ. 2ನೇ ಹಂತದ ನಾಯಕರು ಬೆಳೆಯಬೇಕು. ಸಿಎಂ ಡಿಸಿಎಂ ದೆಹಲಿಗೆ ವರಿಷ್ಠರ ಭೇಟಿಗೆ ಹೋಗುತ್ತಾರೆ. ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ದ. ವರಿಷ್ಟರ ಸೂಚನೆಯಂತೆ ನಡೆಯುತ್ತೇವೆ ಎಂದರು.

ಇನ್ನು 100 ರಷ್ಟು ಬಿಪಿಎಲ್ ಕಾರ್ಡ್ ಸಮಸ್ಯೆ ಬಗೆಹರಿದಿದೆ. ಸಮಸ್ಯೆ ಬಗೆಹರಿಸಲು ನಾನು ಒಂದು ವಾರ ಗಡುವು ಕೊಟ್ಟಿದ್ದೆ. ಅಧಿಕಾರಿಗಳು ಮೂರ್ನಾಲ್ಕು ದಿನಗಳಲ್ಲಿ ಸರಿಪಡಿಸಿದ್ದಾರೆ. ಬಡವರಿಗೆ ಅಕ್ಕಿ ಕೊಡುವ ಕೆಲಸ ಮುಂದುವರೆಯುತ್ತದೆ ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.

Key words: Minister, KH Muniyappa, high command, cabinet restructure