Wednesday, September 30, 2026

BDA Apartments

ಜಾನಪದ ಕಲೆ ಕಂಸಾಳೆ ಕಲಾವಿದ ಮೈಸೂರಿನ ಕುಮಾರಸ್ವಾಮಿ ನಿಧನ BDA JK_Adv BDA Adv
Home Front Page ಜಾನಪದ ಕಲೆ ಕಂಸಾಳೆ ಕಲಾವಿದ ಮೈಸೂರಿನ ಕುಮಾರಸ್ವಾಮಿ ನಿಧನ.

ಜಾನಪದ ಕಲೆ ಕಂಸಾಳೆ ಕಲಾವಿದ ಮೈಸೂರಿನ ಕುಮಾರಸ್ವಾಮಿ ನಿಧನ.

ಜಾನಪದ ಕಲೆ ಕಂಸಾಳೆ ಕಲಾವಿದ ಮೈಸೂರಿನ ಕುಮಾರಸ್ವಾಮಿ ನಿಧನ puliyogare,ayyangar WhatsApp 11 16 at 12.03....

ಮೈಸೂರು,ನವೆಂಬರ್,25,2024 (www.justkannada.in): ಜಾನಪದ ಕಲೆ ಕಂಸಾಳೆ ಕಲಾವಿದ ಮೈಸೂರಿನ ಕುಮಾರಸ್ವಾಮಿ ಇಂದು ನಿಧನರಾಗಿದ್ದಾರೆ.

ಕಂಸಾಳೆ ಮಹಾದೇವಯ್ಯನವರ ಸುಪುತ್ರರಾದ ಕುಮಾರಸ್ವಾಮಿ 1951 ರಲ್ಲಿ ಮೈಸೂರಿನ ಬಂಡಿಕೇರಿಯಲ್ಲಿ ಜನಿಸಿದ್ದರು. ಬಾಲ್ಯದಿಂದಲೇ ತಂದೆ ಜೊತೆ ಜಾನಪದ ಕಲೆ ಕಂಸಾಳೆಯನ್ನ ಮೈಗೂಡಿಸಿಕೊಂಡು ರಾಜ್ಯ ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತಂಡ ಕಟ್ಟಿಕೊಂಡು  ಕಂಸಾಳೆ ಪ್ರದರ್ಶನ ನೀಡುತ್ತಾ ಬಂದಿದ್ದರು.

ನಟ ಶಿವರಾಜ್ ಕುಮಾರ್ ಅಭಿನಯದ “ಜನುಮದ ಜೋಡಿ ” ಚಿತ್ರದ ಕೋಲು ಮಂಡೆ… ಹಾಡಿನ ಕಂಸಾಳೆ ಸಂಗೀತದ ನೃತ್ಯ ಸಂಯೋಜನೆ ಮಾಡಿ ಡಾ. ರಾಜಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರಿಂದ ಸೈ ಎನಿಸಿಕೊಂಡಿದ್ದರು ಕುಮಾರಸ್ವಾಮಿ.

ಇವರಿಗೆ ಹಲವಾರು ಸಂಘ ಸಂಸ್ಥೆಗಳು ಜಾನಪದ ಶ್ರೀ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿ ನೀಡಿ ಗೌರವಿಸಿವೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಚಿತಗಾರದಲ್ಲಿ ಇವರ ಅಂತ್ಯ ಸಂಸ್ಕಾರ ನಡೆಯಲಿದೆ.

Key words: Mysore, Folk artist, Kumaraswamy, passes away