Monday, October 12, 2026

Dasara Wishes

Happy Dasara
Home Front Page ಮಂಡ್ಯದ ಜನರನ್ನ ನಾವು ನೋಡಿಕೊಳ್ಳುತ್ತೇವೆ ಎಂದಿದ್ದ ಜೋಡೆತ್ತುಗಳು ಈಗ ಅಡ್ರಸ್ಸೇ ಇಲ್ಲ- ಮಾಜಿ ಸಂಸದ ಎಲ್...

ಮಂಡ್ಯದ ಜನರನ್ನ ನಾವು ನೋಡಿಕೊಳ್ಳುತ್ತೇವೆ ಎಂದಿದ್ದ ಜೋಡೆತ್ತುಗಳು ಈಗ ಅಡ್ರಸ್ಸೇ ಇಲ್ಲ- ಮಾಜಿ ಸಂಸದ ಎಲ್ .ಆರ್ ಶಿವರಾಮೇಗೌಡ ಟಾಂಗ್…

ಮಂಡ್ಯ,ಸೆ,28,2019(www.justkannada.in): ಚುನಾವಣಾ ಸಂದರ್ಭದಲ್ಲಿ ಮಂಡ್ಯದ ಜನರನ್ನ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳದ್ದ ಜೋಡೆತ್ತುಗಳು ಈಗ ಅಡ್ರೆಸ್ಸೇ ಇಲ್ಲ ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಟಾಂಗ್ ನೀಡಿದ್ದಾರೆ.

ಮಂಡ್ಯದ ನಾಗಮಂಗಲದಲ್ಲಿ ಇಂದು ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ,  ಕುಮಾರಸ್ವಾಮಿಯವರನ್ನು ಕೈ ಬಿಡಬೇಡಿ ಎಂದು ಮನವಿ ಮಾಡಿದ್ದೆವು. ಆದರೆ ಜನ ಸ್ವಾಭಿಮಾನಕ್ಕೆ ಮತ ನೀಡಬೇಕು ಅಂತಾ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸಿದ್ದಾರೆ. ಈಗ ಕಬ್ಬಿಗೆ ಬೆಂಕಿ ಹಚ್ಚುವ ಪರಿಸ್ಥಿತಿ ಬಂದಿದೆ. ಚುನಾವಣೆ ಸಂದರ್ಭದಲ್ಲಿ ಜೋಡೆತ್ತುಗಳು ಬಂದಿದ್ದವು. ಮಂಡ್ಯ ಜನರನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ನೀವು ಮುಂದೆ ನಡೆಯಿರಿ. ಹಿಂದೇ ನಾವು ಬರುತ್ತೇವೆ ಎಂದು ಹೇಳಿದ್ದವು.ಅಂದು ಮಂಡ್ಯ ಉದ್ದಗಲಕ್ಕೆ ಓಡಾಡಿದ್ದ ಜೋಡೆತ್ತುಗಳನ್ನ ಮತ್ತು ಸಂಸದರನ್ನ ಈಗ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದರು.

ರೈತರ ಸಮಸ್ಯೆ ಪರಿಹಾರ ಮಾಡಲು ಸುಮಲತಾ ಮಂಡ್ಯದಲ್ಲಿ ಇರುತ್ತಾರೆ ಅಂದುಕೊಂಡಿದ್ದವು. ರೈತರು ಸತ್ತರೂ ಬಡಿದುಕೊಂಡರೂ ಬರುತ್ತಿಲ್ಲ. ಸಂಸದರೇ ಈಗ ಬನ್ನಿ ರೈತರ ಸಮಸ್ಯೆಯನ್ನ ಪರಿಹರಿಸೋಣ. ರೈತರ ಸಮಸ್ಯೆ ಪರಿಹಾರಕ್ಕಾಗಿ ಹೋರಾಟಕ್ಕೆ ಇಳಿಯಿರಿ ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಆಗ್ರಹಿಸಿದರು.

 

Key words: Mandya-jodetthu-where- Former MP -LR Shivaramegowda -Tong