Saturday, August 1, 2026

BDA Apartments

Home Crime ಜಿಂಕೆ ಕೊಂದು ಮಾಂಸ ಮಾರಾಟ ಯತ್ನ: ಐವರ ಬಂ‍ಧನ

ಜಿಂಕೆ ಕೊಂದು ಮಾಂಸ ಮಾರಾಟ ಯತ್ನ: ಐವರ ಬಂ‍ಧನ

ಗುಂಡ್ಲುಪೇಟೆ,ನವೆಂಬರ್,16,2024 (www.justkannada.in): ಜಿಂಕೆ ಕೊಂದು ಮಾಂಸ ಮಾರಾಟಕ್ಕೆ ಯತ್ನಿಸಿದ ಐವರನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಅಣ್ಣೂರು ಕೇರಿ  ಬಫರ್ ಜೋನ್ ವಲಯದಲ್ಲಿ ಈ ಘಟನೆ ನಡೆದಿದೆ. ಖಚಿತ ಮಾಹಿತಿ ಆಧರಿಸಿ ಆರ್ಎಫ್ಓ ಸತೀಶ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಜಿಂಕೆ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ನಡೆಸಲಾಗಿತ್ತು.

ದಾಳಿ ವೇಳೆ ಮಾಂಸದ ಸಮೇತ ತಾಲೂಕಿನ ಅಣ್ಣೂರು ಕೇರಿ ಗ್ರಾಮದ ರವಿ, ಮಹೇಶ್, ಸಿದ್ದರಾಜು, ಸಿದ್ದಶೆಟ್ಟಿ, ಮತ್ತು ಸುರೇಶ್ ಎಂಬುವರನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳಿಂದ ನಾಡ ಬಂದೂಕು, ತಲೆ ಬ್ಯಾಟರಿ, ಮಚ್ಚು, ಬ್ಯಾಗ್ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಐವರು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.

Key words: Attempt, kill, deer, sell meat, Five, arrested