Thursday, August 6, 2026

BDA Apartments

Home Front Page ಡಿಸಿಎಂ ಲಕ್ಷ್ಮಣ್ ಸವದಿ ನಿಂದನೆ ವಿಚಾರ: ಕಣ್ಣೀರಿಟ್ಟ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ…

ಡಿಸಿಎಂ ಲಕ್ಷ್ಮಣ್ ಸವದಿ ನಿಂದನೆ ವಿಚಾರ: ಕಣ್ಣೀರಿಟ್ಟ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ…

ಬೆಳಗಾವಿ,ಸೆ,27,2019(www.justkannada.in): ತಮ್ಮ ವಿರುದ್ದ ಡಿಸಿಎಂ ಲಕ್ಷ್ಮಣ್ ಸವದಿ ಅವಾಚ್ಯ ಶಬ್ದ ಬಳಸಿದ್ದಕ್ಕೆ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ ಕಣ್ಣೀರಿಟ್ಟಿದ್ದಾರೆ.

ಕೃಷ್ಣಾ ನದಿ ತೀರದ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರ ಅಳಲು ಕೇಳಲು ಹೋದ ವೇಳೆ  ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ  ಡಿಸಿಎಂ ಲಕ್ಷ್ಮಣ್ ಸವದಿ ಅವಾಚ್ಯ ಪದ ಬಳಕೆ ಮಾಡಿದ್ದರು. ಕುಮಟಳ್ಳಿ ಅಂತಹ ದರಿದ್ರ ಮಕ್ಕಳ ಹೆಸರು ನೆನಪಿಸಬೇಡಿ ಎಂದ ಲಕ್ಷ್ಮಣ ಸವದಿ ನಿಂದಿಸಿದ್ದರು ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿ ಕಣ್ಣೀರಿಟ್ಟ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ, ಅವರ ಮಾತಿನಿಂದ ನನಗೂ ಕೂಡ ಮನಸ್ಸಿಗೆ ಬೇಜಾರು, ನೋವಾಗಿದೆ, ಲಕ್ಷ್ಮಣ ಸವದಿಯವರು ಹೀಗೆ ಮಾತನಾಡಬಾರದಿತ್ತು.  ಯಾಕೆ ಹೀಗೆ ಮಾತನಾಡಿದರು ಅನ್ನೋದು ತಿಳಿದಿಲ್ಲ, ಅವರ ಮಾತಿಗೆ ಏನ್ ಪ್ರತಿಕ್ರಿಯೆ ಕೊಡಬೇಕು ಅಂತ ತಿಳಿಯುತ್ತಿಲ್ಲ. ವಿಷ ಕೊಟ್ಟರೂ ಅಮೃತವಾಗಲಿ ಎಂದು ಬಯಸುವವ ನಾನು, ಅವರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಹೇಳಿದರು.

Key words: DCM- Laxman Sawadi -Abuse -Mahesh Kumutalli-tear