Friday, July 31, 2026

BDA Apartments

Home Front Page ರಾಜಕೀಯ ಜಿದ್ದು ಹತಾಶೆಯಿಂದ ಎಸ್ ಐಟಿ ರಚನೆ- ಮಾಜಿ ಸಚಿವ ಅರಗ ಜ್ಞಾನೇಂದ್ರ ಕಿಡಿ

ರಾಜಕೀಯ ಜಿದ್ದು ಹತಾಶೆಯಿಂದ ಎಸ್ ಐಟಿ ರಚನೆ- ಮಾಜಿ ಸಚಿವ ಅರಗ ಜ್ಞಾನೇಂದ್ರ ಕಿಡಿ

ಶಿವಮೊಗ್ಗ, ನವೆಂಬರ್,15,2024 (www.justkannada.in): ಕೋವಿಡ್ ಹಗರಣ ತನಿಖೆಗೆ ರಾಜ್ಯ ಸರ್ಕಾರದಿಂದ ಎಸ್ ಐಟಿ ರಚನೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ರಾಜಕೀಯ ಜಿದ್ದು ಹತಾಶೆಯಿಂದ ಎಸ್ ಐಟಿ ರಚನೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಅರಗ ಜ್ಞಾನೇಂದ್ರ, ಯಾವಾಗಲೂ ಕಾಂಗ್ರೆಸ್ ನವರೇ ಹಗರಣದಲ್ಲಿ ಸಿಲುಕಿಕೊಂಡಿರುತ್ತಾರೆ. ರಾಜಕೀಯ ಜಿದ್ದು ಹತಾಶೆಯಿಂದ ಎಸ್ ಐಟಿ ರಚನೆ ಮಾಡಿದ್ದಾರೆ.  ಕೋವಿಡ ವೇಳೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಇರಲಿಲ್ಲ ಮಾಸ್ಕ್,  ಪಿಪಿಇ ಕಿಟ್ ಇರಲಿಲ್ಲ ಇಂತಹ  ಪರಿಸ್ಥಿತಿಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಕೋವಿಡ್ ಸಂದರ್ಭದಲ್ಲಿ ಜನರನ್ನ ಬದಿಕಿಸೋದು ಮುಖ್ಯ ಆಗಿತ್ತು.  ಬಿಎಸ್ ವೈ ಸರ್ಕಾರ ಜನರನ್ನ ಬದುಕಿಸುವ ಕೆಲಸ ಮಾಡಿದೆ ಎಂದು ಟಾಂಗ್ ಕೊಟ್ಟರು.

ರಾಜ್ಯದ ಜನ ಇದೆಲ್ಲವನ್ನು ನೋಡುತ್ತಿದ್ದಾರೆ ಇದೆಲ್ಲಾ ನಡೆಯಲ್ಲ. ಮುಡಾ ಹಗರಣ ಬಳಿಕ ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.

Key words: Formation, SIT, Former Minister, Araga Jnanendra