Saturday, September 26, 2026

BDA Apartments

ಸಿಪಿವೈ ಯಾವ ಆಯಾಮದಲ್ಲಿ ಹೇಳಿದ್ದಾರೆ ಗೊತ್ತಿಲ್ಲ- ಮಾಜಿ ಸಂಸದ ಡಿ.ಕೆ ಸುರೇಶ್ B...
Home Front Page ಸಿಪಿವೈ ಯಾವ ಆಯಾಮದಲ್ಲಿ ಹೇಳಿದ್ದಾರೆ ಗೊತ್ತಿಲ್ಲ- ಮಾಜಿ ಸಂಸದ ಡಿ.ಕೆ ಸುರೇಶ್

ಸಿಪಿವೈ ಯಾವ ಆಯಾಮದಲ್ಲಿ ಹೇಳಿದ್ದಾರೆ ಗೊತ್ತಿಲ್ಲ- ಮಾಜಿ ಸಂಸದ ಡಿ.ಕೆ ಸುರೇಶ್

ಬೆಂಗಳೂರು,ನವೆಂಬರ್,15,2024 (www.justkannada.in):  ಸಚಿವ ಜಮೀರ್ ಹೇಳಿಕೆಯಿಂದ  ಒಕ್ಕಲಿಗ ಮತಗಳು ಬಂದಿಲ್ಲ ಅನ್ನಿಸುತ್ತೆ ಎಂಬ  ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹೇಳಿಕೆ ಕುರಿತು ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಸುರೇಶ್, ಚುನಾವಣೆಯಲ್ಲಿ ತಂತ್ರಗಾರಿಗೆ ಬಹಳ ಮುಖ್ಯ ಪಾತ್ರ ವಹಿಸುತ್ತೆ ನಮ್ಮ ಕಾರ್ಯಕರ್ತರು ಮುಖಂಡರು ಆತ್ಮವಿಶ್ವಾಸದಿಂದ ಇದ್ದಾರೆ . ಸಿಪಿ  ಯೋಗೇಶ್ವರ್ ಯಾವ ಆಯಾಮ ಇಟ್ಟು ಹೇಳಿದ್ದಾರೆ ಗೊತ್ತಿಲ್ಲ. ಫಲಿತಾಂಶ ಕಾಂಗ್ರೆಸ್ ಪರವಾಗಿ ಇರುತ್ತೆ ಎಂಬ ವಿಶ್ವಾಸವಿದೆ ಎಂದರು.

ಇನ್ನು ಜಮೀರ್ ಅಹ್ಮದ್ ಖಾನ್ ಹೇಳಿಕೆ ಅವರ ವೈಯಕ್ತಿಕ. ಡಿಕೆ ಶಿವಕುಮಾರ್ ರನ್ನು ಕಳ್ಳ ಅಂತಾ ಎಂದಾಗ ಏನು ಮಾತನಾಡಲಿಲ್ಲ. ಮಾತನಾಡುವಾಗ ಕೆಲವೊಂದು ತಪ್ಪುಗಳಾಗುತ್ತೆ ಸಚಿವ ಜಮೀರ್ ಹೇಳಿಕೆಯನ್ನು ಸ್ವಲ್ಪ ಮಟ್ಟಿಗೆ ತಿರುಚಲಾಗಿದೆ.  ಜನರಿಗೆ ಹಣ, ಧರ್ಮ ಎರಡೇ ಬೇಕಾಗಿರುವುದು.  ಕೆಲಸ ಮಾಡಿದ್ದೇವೆ ವೋಟು ಹಾಕಿ ಅಂತಾ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಇದು ನನ್ನ ಹೇಳಿಕೆ ಅಲ್ಲ.  ಜನರ ಅಭಿಪ್ರಾಯ ಎಂದು  ಡಿಕೆ ಸುರೇಶ್ ತಿಳಿಸಿದರು.

Key words: CP Yogeshwar, statement, Former MP,  DK Suresh