Friday, September 11, 2026

BDA Apartments

Home Front Page ಬೆಂಗಳೂರಿಗರೇ ಗಮನಿಸಿ: ನ.16 ರಂದು ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ: ನ.16 ರಂದು ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು,ನವೆಂಬರ್,14,2024 (www.justkannada.in): ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ  ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಹೆಚ್ಎಸ್‌ ಆರ್‌ ಬಡಾವಣೆಯ ಈ ಕೆಳಕಂಡ ಪ್ರದೇಶಗಳಲ್ಲಿ ಶನಿವಾರ (16.11.2024) ರಂದು ಬೆಳಗ್ಗೆ 10:00 ರಿಂದ ಸಂಜೆ 5:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

“ಐ.ಎ.ಎಸ್. ಕಾಲೋನಿ, ಕೆ.ಎ.ಎಸ್. ಕಾಲೋನಿ, ಎನ್.ಎಸ್.ಪಾಳ್ಯ, ಇಂಡಸ್ಟ್ರಿಯಲ್ ಏರಿಯಾ, ಜಹ್ನವಿ ಎನ್ಕ್ಲೇವ್, ಅನಂತ ಲೇಔಟ್, ಬಳೇಹಳ್ಳಿ ಬನ್ನೇರುಘಟ್ಟ ಮೈನ್ ರೋಡ್, ದೇವರಬಸನಹಳ್ಳಿ, ಆದರ್ಶ ಸಾಯಿ ಶೃಷ್ಟಿ, ಸ್ಟೇರಿಲಿಂಗ್ ಅಸೆಂಟಿನಾ, ಸ್ವಾಮಿ ಜಿ.ವಿ. ಹೋಟೆಲ್, ಎಲೆಕ್ಟ್ರಾನಿಕ್ ಸಿಟಿ ಫೇಸ್-1, ನಾಲಾದ್ರಿ ರೋಡ್, ಹೆಬ್ಬಗೋಡಿ, ವೀರಸಂದ್ರ, ಗೊಲ್ಲಹಳ್ಳಿ, ಇ.ಹೆಚ್.ಟಿ. ಇನ್ಫೋಸಿಸಿ ಮತ್ತು ಹುಳಿಮಂಗಲ ವಿ.ವಿ.ಕೇಂದ್ರದಿಂದ ಹೊರಹೋಗುವ ಫೀಡರ್ ಗಳು,

ಎಲೆಕ್ಟ್ರಾನಿಕ್ ಸಿಟಿ ಫೇಸ್-2, ವೀರಸಂದ್ರ, ದೊಡ್ಡನಾಗಮಂಗಳ, ಟೆಕ್ ಮಹಿಂದ್ರ, ಇ.ಹೆಚ್.ಟಿ. ಟಾಟಾ, ಬಿ.ಪಿ. ಸೋಲಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Key words: Bangalore, Power, outage, Nov 16