Sunday, September 20, 2026

BDA Apartments

ಬಿ.ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ BDA J...
Home Front Page ಬಿ.ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

ಬಿ.ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

ಮೈಸೂರು,ನವೆಂಬರ್,12,2024 (www.justkannada.in):  ವಾಲ್ಮೀಕಿ ನಿಗಮ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬಿ. ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಹೆಚ್ ಡಿ ಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣದ ವೇಳೆ ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡುವಂತೆ  ಬೆಂಬಲಿಗರು ಬೇಡಿಕೆ ಇಟ್ಟರು. ಈ ಸಮಯದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ವೇಳೆ  ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ಎಲ್ಲಿ ಖಾಲಿ ಇದೆ, ಹಾಗಂತ ಸುಳ್ಳು ಹೇಳಲಿಕೆ ಆಗಲ್ಲ. ಈಗ ಹೇಳಿ ಆ ನಂತರ ಮಾತಿಗೆ ತಪ್ಪಲು ಆಗುತ್ತಾ. ನಾಗೇಂದ್ರ ಅವರಿಗೆ ಕೊಡಬೇಕು, ಕೊಡ್ತಿನಿ ಎಂದು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಆಗಿದೆ.ಎಷ್ಟು ಇಟ್ಟಿದ್ದೋ ಅದಕ್ಕಿಂತ ಒಂದು ರೂಪಾಯಿ ಕಡಿಮೆ ಆಗೋಲ್ಲ.ನಾಗೇಂದ್ರ ಅವರ ಮೇಲೂ ಸುಳ್ಳು ಕೇಸ್ ಹಾಕಿಸಿದರು. ಅವರು ಈಗ ಬೇಲ್ ಮೇಲೆ ಹೊರಗೆ ಬಂದಿದ್ದಾರೆ. ಸದ್ಯ ನಿಗಮ ನನ್ನ ಬಳಿಯೇ ಇದೆ. ಚುನಾವಣೆ ಮುಗಿದ ಮೇಲೆ ಒಂದು ತಿರ್ಮಾನ ಮಾಡುತ್ತೇನೆ ಎಂದರು.

Key words: CM Siddaramaiah, clarified, B. Nagendra again, Minister