Sunday, September 27, 2026

BDA Apartments

ಚನ್ನಪಟ್ಟಣ ಉಪಚುನಾವಣೆ: ಶಾಂತಿಯುತ ಮತದಾನಕ್ಕೆ ಅಂತಿಮ ಸಿದ್ದತೆ BDA JK_Adv BDA Adv
Home Front Page ಚನ್ನಪಟ್ಟಣ ಉಪಚುನಾವಣೆ: ಶಾಂತಿಯುತ ಮತದಾನಕ್ಕೆ ಅಂತಿಮ ಸಿದ್ದತೆ

ಚನ್ನಪಟ್ಟಣ ಉಪಚುನಾವಣೆ: ಶಾಂತಿಯುತ ಮತದಾನಕ್ಕೆ ಅಂತಿಮ ಸಿದ್ದತೆ

ರಾಮನಗರ, ನವೆಂಬರ್ ,12,2024 (www.justkannada.in): ರಾಜ್ಯದ ಚನ್ನಪಟ್ಟಣ ಶಿಗ್ಗಾವಿ ಹಾಗೂ ಸಂಡೂರು ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, ಅಂತಿಮ ಸಿದ್ದತೆ ನಡೆಸಲಾಗುತ್ತಿದೆ.

ತೀವ್ರ ಕುತೂಹಲ ಮೂಡಿಸಿರುವ ಚನ್ನಪಟ್ಟಣ ಉಪಚುನಾವಣೆ ಮತದಾನಕ್ಕೆ ಸಿದ್ದತೆ ನಡೆಸಲಾಗುತ್ತಿದ್ದು ಚುನಾವಣಾ ಕಾರ್ಯಕ್ಕೆ 1252 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ರಾಮನಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭದ್ರತೆ ವಹಿಸಲಾಗಿದ್ದು, 8 ಪ್ಯಾರಾ ಮಿಲಿಟರಿ ಸೇರಿ ಪೊಲೀಸರನ್ನ ನಿಯೋಜನೆ  ಮಾಡಲಾಗಿದೆ.

ಚನ್ನಪಟ್ಟಣದಲ್ಲಿ ನಾಳೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು  .  ಶಾಂತಿಯುತ ಮತದಾನಕ್ಕೆ ಸಿದ್ದತೆ ನಡೆಸಲಾಗಿದೆ.  ಚನ್ನಪಟ್ಟಣದಾದ್ಯಂತ ಮದ್ಯ ಮಾರಾಟ ಬಂದ್ ಮಾಡಲಾಗಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಲ್ಲಿ NDA ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಸ್ಪರ್ಧಿಸುತ್ತಿದ್ದಾರೆ.

Key words: Channapatnam, by-election, Final preparations, polling