Saturday, August 8, 2026

BDA Apartments

Home Front Page ಕರಿಯ ಕುಮಾರಸ್ವಾಮಿ ಎಂಬ ಜಮೀರ್ ಹೇಳಕೆ:  ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ಏನು..?

ಕರಿಯ ಕುಮಾರಸ್ವಾಮಿ ಎಂಬ ಜಮೀರ್ ಹೇಳಕೆ:  ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ಏನು..?

ಬೆಂಗಳೂರು,ನವೆಂಬರ್,12,2024 (www.justkannada.in): ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ಕರಿಯ ಕುಮಾರಸ್ವಾಮಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಜಮೀರ್ ಅಹ್ಮದ್ ಖಾನ್ ಮತ್ತು ಹೆಚ್.ಡಿ ಕುಮಾರಸ್ವಾಮಿ  ಅವರಿಬ್ಬರು ಹಳೆ ಸ್ನೇಹಿತರು. ಹಲವು ಬಾರಿ ಈ ರೀತಿ ಮಾತನಾಡಿದ್ದಾರೆ. ಅವರವರ ಹೇಳಿಕೆಗಳು  ಅವರ ವೈಯಕ್ತಿಕ ಎಂದರು.

ರಾಜ್ಯದಲ್ಲಿ ಅಸಮರ್ಥ ಸರ್ಕಾರ, ಅಸಮರ್ಥ ಸಿಎಂ ಎಂಬ ವಿಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ಅದು ಅವರ  ಅಭಿಪ್ರಾಯವಷ್ಟೆ.  ನಮ್ಮ ಅಭಿಪ್ರಾಯ ಬೇರೆ.  ನಮ್ಮದು ಸಮರ್ಥ ಸರ್ಕಾರ ಸಮರ್ಥ ಸಿಎಂ ಎಂದರು.

Key words: Zameer, controversial, statement, HDK, Minister, Parameshwar