Monday, August 24, 2026

BDA Apartments

Home Front Page ನ.23ರ ಬಳಿಕ ರಾಜ್ಯದಲ್ಲಿ ಸಿಎಂ ಬದಲಾಗೋದು ನಿಶ್ಚಿತ- ಶಾಸಕ ಜನಾರ್ದನ ರೆಡ್ಡಿ

ನ.23ರ ಬಳಿಕ ರಾಜ್ಯದಲ್ಲಿ ಸಿಎಂ ಬದಲಾಗೋದು ನಿಶ್ಚಿತ- ಶಾಸಕ ಜನಾರ್ದನ ರೆಡ್ಡಿ

ಬಳ್ಳಾರಿ, ನವೆಂಬರ್,8,2024 (www.justkannada.in): ನವೆಂಬರ್ 23ರ ಬಳಿಕ ರಾಜ್ಯದಲ್ಲಿ ಸಿಎಂ ಬದಲಾಗೋದು ನಿಶ್ಚಿತ ಎಂದು ಶಾಸಕ ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಬಳ್ಳಾರಿಯ ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ,  ನವೆಂಬರ್ 23ರ ಬಳಿಕ ಕಾಂಗ್ರೆಸ್ ಸಿಎಂ  ಸ್ಥಾನವನ್ನ ಬದಲಿಸುತ್ತದೆ. ಮುಡಾ ಟೆನ್ಷನ್ ನಲ್ಲಿ ಸಿಎಂ ಸಿದ್ದರಾಮಯ್ಯ ನಿದ್ದೆ ಮಾಡತ್ತಿಲ್ಲ. ಸಿದ್ದರಾಮಯ್ಯಗೆ ಇಡಿ ಬಂಧನ ಭೀತಿ ಕಾಡುತ್ತಿದೆ  ಎಂದರು.

ಹಿಡಿತ ತಪ್ಪಿ ಇವತ್ತು ಮಂತ್ರಿಗಳು ದೋಚಿಕೊಳ್ಳುತ್ತಿದ್ದಾರೆ.  ಸಚಿವರ ಅಧಿಕಾರ ಯಾವತ್ತು ಹೋಗುತ್ತದೆಯೋ ಗೊತ್ತಿಲ್ಲ.  ಮುಡಾ ಪ್ರಕರಣದಲ್ಲಿ ಸಿಎಂ ಮೊದಲ ಆರೋಪಿ . ಕೇಸ್ ತನಿಖೆ ಸಿಬಿಐಗೆ ಕೊಟ್ಟರೇ ಬಂಧನ ಭೀತಿ ಎದುರಾಗುತ್ತೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.

Key words: CM, change, after, November 23 , MLA, Janardhana Reddy