Sunday, September 20, 2026

BDA Apartments

Home Front Page ನಮ್ಮ ಸಂಸ್ಕೃತಿ ಹೆಣ್ಣು ಮಕ್ಕಳು ಮಾತನಾಡುವ ಭಾಷೆ ಇದಲ್ಲ- ಶೋಭಾ ಕರಂಧ್ಲಾಜೆ ವಿರುದ್ದ ಭೈರತಿ ಸುರೇಶ್...

ನಮ್ಮ ಸಂಸ್ಕೃತಿ ಹೆಣ್ಣು ಮಕ್ಕಳು ಮಾತನಾಡುವ ಭಾಷೆ ಇದಲ್ಲ- ಶೋಭಾ ಕರಂಧ್ಲಾಜೆ ವಿರುದ್ದ ಭೈರತಿ ಸುರೇಶ್ ವಾಗ್ದಾಳಿ

ಬೆಂಗಳೂರು, ಅಕ್ಟೋಬರ್,28,2024 (www.justkannada.in): ಧಮ್  ತಾಕತ್ತಿದ್ದರೆ ಅಕ್ರಮಗಳ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ  ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಭೈರತಿ ಸುರೇಶ್,  ಶೋಭಾ ಕರಂದ್ಲಾಜೆ ನಿನ್ನೆ ಹೇಳಿದ ಮಾತುಗಳನ್ನು ಕೇಳಿದ್ದೇನೆ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳು ಮಾತನಾಡುವ ಭಾಷೆ ಇದಲ್ಲ. ಹೆಣ್ಣು ಮಕ್ಕಳು ಯಾವತ್ತಾದರೂ ಧಮ್ ತಾಕತ್  ಬಗ್ಗೆ ಮಾತನಾಡುತ್ತಾರಾ? ಇದು ಹೆಣ್ಣುಮಕ್ಕಳು ಮಾತನಾಡುವ ಭಾಷೆನಾ? ಎಂದು ಕಿಡಿಕಾರಿದರು.

ನಮ್ಮ ದೇಶ ಸುಸಂಸ್ಕೃತ ದೇಶ. ಇಲ್ಲಿನ ಹೆಣ್ಣುಮಕ್ಕಳನ್ನು ನಾವು ಭಾರತ ಮಾತೆ, ಕ್ಷಮಯಾಧರಿತ್ರಿ ಎಂದೆಲ್ಲ ಗೌರವಿಸುತ್ತೇವೆ. ನಮ್ಮ ಸಂಸ್ಕೃತಿಯ ಹೆಣ್ಣುಮಕ್ಕಳು ಮಾತನಾಡುವ ಭಾಷೆ ಬೇರೆಯೇ ಇದೆ.. ಶೀಘ್ರದಲ್ಲೇ ಶೋಭಾ ಕರಂದ್ಲಾಜೆ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಭೈರತಿ ಸುರೇಶ್ ಗುಡುಗಿದರು.

Key words: culture, language, Shobha Karandhlaje, Bhairati Suresh