Friday, August 21, 2026

BDA Apartments

Home Front Page ಹೆಚ್ ಡಿಕೆ ಅವರ ಟ್ರಿಕ್ಸ್ ಜನರಿಗೆ ಗೊತ್ತಿದೆ: ನಿಖಿಲ್ ಸ್ಪರ್ಧೆ ಬಗ್ಗೆ ವ್ಯಂಗ್ಯವಾಡಿದ ‘ಕೈ’ ಅಭ್ಯರ್ಥಿ...

ಹೆಚ್ ಡಿಕೆ ಅವರ ಟ್ರಿಕ್ಸ್ ಜನರಿಗೆ ಗೊತ್ತಿದೆ: ನಿಖಿಲ್ ಸ್ಪರ್ಧೆ ಬಗ್ಗೆ ವ್ಯಂಗ್ಯವಾಡಿದ ‘ಕೈ’ ಅಭ್ಯರ್ಥಿ ಸಿಪಿವೈ

ಚನ್ನಪಟ್ಟಣ,ಅಕ್ಟೋಬರ್,26,2024 (www.justkannada.in):  ಭಾರಿ ಕುತೂಹಲಕ್ಕೆ ಕಾರಣವಾಗಿರುವ ಚನ್ನಪಟ್ಟಣ ವಿಧಾನಸಭೆ ಉಪಚುನವಣೆಯ ನಾಮಪತ್ರ ಸಲ್ಲಿಕೆ ಕಾರ್ಯ ನಿನ್ನೆ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಮತ್ತು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವೆ ತೀವ್ರ ಪೈಪೋಟಿ ಉಂಟಾಗಿದೆ.

ಈ ಮಧ್ಯೆ ಬಿಜೆಪಿಗೆ ಟಿಕೆಟ್ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸಿಪಿವೈ, ಹೆಚ್.ಡಿ ಕುಮಾರಸ್ವಾಮಿ ರಾಜಕೀಯವಾಗಿ ಯಾರಿಗೂ ಸ್ಥಾನಮಾನ ಕೊಟ್ಟಿಲ್ಲ. ಏನೋ ಕಣ್ಣೀರು ಹಾಕೋದು, ಎಮೋಷನ್ ಮಾಡೋದು ಇದೇ ಅವರ ಕೆಲಸ ಎಂದು ಲೇವಡಿ ಮಾಡಿದರು.

ಚನ್ನಪಟ್ಟಣದಲ್ಲಿ ಕಾರ್ಯಕರ್ತರು ಸ್ಪರ್ಧೆ ಅಂತಿದ್ದರು. ಆದರೆ ಹೆಚ್ ಡಿಕೆ ತಾವೇ ಸ್ಕ್ರಿಪ್ಟ್ ಬರೆಯುತ್ತಾರೆ  ತಾವೇ ಜನರನ್ನ ಕಳುಹಿಸುತ್ತಾರೆ. ಕಾರ್ಯಕರ್ತರು ಹೇಳಿದ್ದರೆಂದು ತಮ್ಮ ಮನೆಯವರನ್ನೇ  ನಿಲ್ಲಿಸುತ್ತಾರೆ. ಇದೆಲ್ಲಾ ಅವರ ಟ್ರಿಕ್. ಇದು  ಜನರಿಗೆ ಗೊತ್ತಿದೆ ಎಂದು ಸಿಪಿ ಯೋಗೇಶ್ವರ್ ವಾಗ್ದಾಳಿ ನಡೆಸಿದರು.

Key words: Channapatna By-election, HDK, tricks, CP Yogeshwar