Sunday, August 2, 2026

BDA Apartments

Home Front Page ಸಿಎಂ ಸಿದ್ಧರಾಮಯ್ಯ ಮತ್ತು ಕುಟುಂಬದ ಒಳಿತಿಗೆ  ಅಭಿಮಾನಿಗಳಿಂದ ಹುಣ್ಣಿಮೆ ಪೂಜೆ

ಸಿಎಂ ಸಿದ್ಧರಾಮಯ್ಯ ಮತ್ತು ಕುಟುಂಬದ ಒಳಿತಿಗೆ  ಅಭಿಮಾನಿಗಳಿಂದ ಹುಣ್ಣಿಮೆ ಪೂಜೆ

ಮೈಸೂರು, ಅಕ್ಟೋಬರ್,17,2024 (www.justkannada.in): ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಪ್ರಕರಣದಿಂದ ಹೊರಬರಬೇಕು, ಅವರು ಮತ್ತು ಅವರ ಕುಟುಂಬಕ್ಕೆ ಒಳಿತಾಗಬೇಕು ಎಂದು ಹಾರೈಸಿ ಮೈಸೂರಿನಲ್ಲಿ ಅಭಿಮಾನಿಗಳು ಹುಣ್ಣಿಮೆ ಪೂಜೆ ನೆರವೇರಿಸಿದರು.

ಮೈಸೂರಿನ ಅಗ್ರಹಾರದ ಗಣಪತಿ ದೇವಸ್ಥಾನದಲ್ಲಿ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ನೇತೃತ್ವದಲ್ಲಿ ಪೂಜೆ, ಹೋ‌ಮ‌ಹವನ ನೆರವೇರಿಸಲಾಯಿತು.  ಸಿಎಂ ಸಿದ್ದರಾಮಯ್ಯ ಭಾವಚಿತ್ರ ಹಿಡಿದು ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು.  ಸತ್ಯನಾರಾಯಣ ಪೂಜೆ, ಹೋಮ – ಹವನ, ಬೆಣ್ಣೆ ಅಲಂಕಾರ ಹಾಗೂ ಸಿದ್ದರಾಮಯ್ಯ, ಪಾರ್ವತಿ, ಡಾ.ಯತೀಂದ್ರ  ಅವರ ಹೆಸರಿನಲ್ಲಿ ಅಭಿಮಾನಿಗಳು ಅರ್ಚನೆ ಮಾಡಿಸಿದರು.

ಮುಡಾ‌ ಹಗರಣ ಪ್ರಕರಣದಿಂದ ಸಿಎಂ ಸಿದ್ದರಾಮಯ್ಯ ಹೊರ ಬರಬೇಕು. ಸಿದ್ದರಾಮಯ್ಯ ಕುಟುಂಬಕ್ಕೆ ದೈವಬಲ ಬೇಕು. ವಿರೋಧಿಗಳು ಸರ್ವನಾಶ ಆಗಬೇಕು. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಬೇಕು ಎಂದು ವಿಶೇಷ ಪೂಜೆ ,ಅರ್ಚನೆ ಮೂಲಕ ಪ್ರಾರ್ಥನೆ ಸಲ್ಲಿಸಿದರು.

Key words: CM Siddaramaiah, fans, worshiped, mysore