Saturday, September 19, 2026

BDA Apartments

ಐಶ್(AIISH)ನಲ್ಲಿ ಶ್ರವಣ ದೋಷ ನಿವಾರಣಾ ಸಾಧನ ವಿತರಿಸಿದ ಸಂಸದ ಯದುವೀರ್ BDA JK_Adv BDA Adv
Home Front Page ಐಶ್(AIISH)ನಲ್ಲಿ ಶ್ರವಣ ದೋಷ ನಿವಾರಣಾ ಸಾಧನ ವಿತರಿಸಿದ ಸಂಸದ ಯದುವೀರ್

ಐಶ್(AIISH)ನಲ್ಲಿ ಶ್ರವಣ ದೋಷ ನಿವಾರಣಾ ಸಾಧನ ವಿತರಿಸಿದ ಸಂಸದ ಯದುವೀರ್

ಮೈಸೂರು, ಅಕ್ಟೋಬರ್,14,2024 (www.justkannada.in):  ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ಇಂದು ಶ್ರವಣ ದೋಷ ಮಕ್ಕಳಿಗೆ ಶ್ರವಣ ದೋಷ ನಿವಾರಣಾ ಸಾಧನಗಳನ್ನು ವಿತರಣೆ ಮಾಡಲಾಯಿತು.

ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವನ್ನ ದೀಪ ಬೆಳಗುವ ಮೂಲಕ ಮೈಸೂರು-ಕೊಡಗು ಸಂಸದ  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕಿ ಡಾ. ಎಂ. ಪುಷ್ಪಾವತಿ, ಡಾ. ಸಂದೀಪ್ ಮತ್ತು ಸಂಸ್ಥೆ ಸಿಬ್ಬಂದಿಗಳ ಸಮ್ಮುಖದಲ್ಲಿ 200ಕ್ಕೂ ಹೆಚ್ಚು ಶ್ರವಣ ದೋಷ ಮಕ್ಕಳಿಗೆ ಶ್ರವಣ ದೋಷ ಸಾಧನಗಳನ್ನು ವಿತರಣೆ ಮಾಡಲಾಯಿತು.

ಬಳಿಕ ಮಾತನಾಡಿದ ಸಂಸದ ಯದುವೀರ್, ಒಂದು ಅರೋಗ್ಯಕರ ಸಮಾಜ ನಿರ್ಮಾಣ ಮಾಡುವುದು ಬಹಳ ಮುಖ್ಯ. ನಮ್ಮ ಸಮಾಜಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಅಖಿಲ ಭಾರತ ವಾಕ್ ಶ್ರವಣ  ಸಂಸ್ಥೆಗೆ ಧನ್ಯವಾದಗಳು. ಈ ಸಂಸ್ಥೆ ಮೈಸೂರಿನಲ್ಲಿ ಆರಂಭವಾಗಲು ನಮ್ಮ ತಾತನವರು ಮೂಲ ಕಾರಣ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಭಾರತದಲ್ಲಿ ವೈವಿಧ್ಯತೆಯಲ್ಲಿ ಏಕತೆ ಕಾಣಬಹುದು. ಹಾಗಾಗಿ ಸಮೃದ್ಧ ಭಾರತಕ್ಕೆ ಆರೋಗ್ಯಕರ ಸಮಾಜ ಬಹಳ ಮುಖ್ಯ. ಸನ್ಮಾನ್ಯ ಪ್ರಧಾನಮಂತ್ರಿಗಳ ಆಯುಷ್ ಯೋಜನೆ ಎಲ್ಲಾ ರೀತಿಯ ಜನಸಾಮಾನ್ಯರಿಗೂ ಅನುಕೂಲ ಆಗುತ್ತಿದೆ. ಅದಕ್ಕಾಗಿ ನಾನು ಹಾಗೂ ನಮ್ಮ ಕೇಂದ್ರ ಸರ್ಕಾರ ನಿಮ್ಮ ಸಂಸ್ಥೆ ಜೊತೆ ಇರುತ್ತದೆ ಎಂದು ಹೇಳಿದರು.

Key words: mysore, AIISH, MP, Yaduveer, distribute, hearing aids