Saturday, September 12, 2026

BDA Apartments

ಶಂಕಿತ ಡೆಂಗ್ಯೂಗೆ 2 ವರ್ಷದ ಮಗು ಬಲಿ BDA JK_Adv BDA Adv
Home Crime  ಶಂಕಿತ ಡೆಂಗ್ಯೂಗೆ 2 ವರ್ಷದ ಮಗು ಬಲಿ

 ಶಂಕಿತ ಡೆಂಗ್ಯೂಗೆ 2 ವರ್ಷದ ಮಗು ಬಲಿ

ದಾವಣಗೆರೆ ,ಅಕ್ಟೋಬರ್,14,2024 (www.justkannada.in): ಶಂಕಿತ ಡೆಂಗ್ಯೂಗೆ 2 ವರ್ಷದ ಮಗು  ಸಾವನ್ನಪ್ಪಿರುವ ಘಟನೆ ದಾವಣಗೆರೆ ಚನ್ನಗಿರಿ ತಾಲೂಕಿನ ಚಿಕ್ಕೊಡ ಗ್ರಾಮದಲ್ಲಿ ನಡೆದಿದೆ.

ಚಿಕ್ಕೊಡ ಗ್ರಾಮದ ರಾಜಪ್ಪ ಮತ್ತು ದಿವ್ಯ ದಂಪತಿಯ ಪುತ್ರ ನಿರ್ವಾಣ ಕುಮಾರ್(2) ಡೆಂಗ್ಯೂವಿನಿಂದ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಡೆಂಗ್ಯೂನಿಂದ ಬಳಲುತ್ತಿದ್ದ ಬಾಲಕನನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಕಳೆದ ಐದು ದಿನಗಳಿಂದ ಚಿಕಿತ್ಸೆ ನೀಡಲಾಗಿತ್ತು.  ಆದರೆ ಚಿಕಿತ್ಸೆ ಫಲಿಸದೇ ಬಾಲಕ ನಿರ್ವಾಣ ಕುಮಾರ್ ಸಾವನ್ನಪ್ಪಿದ್ದಾನೆ.

ಗ್ರಾಮದಲ್ಲಿ ಶುಚಿತ್ವ ಇರದ ಹಿನ್ನೆಲೆ ಡೆಂಗ್ಯೂ ಜ್ವರ ತಗುಲಿ ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

Key words: 2-year-old child, death, suspected, dengue