Saturday, August 8, 2026

BDA Apartments

Home DASARA2024 ಮೈಸೂರು ದಸರಾ: ಬನ್ನಿಮರಕ್ಕೆ ಪೂಜೆ ಸಲ್ಲಿಸಿದ ರಾಜವಂಶಸ್ಥ ಯದುವೀರ್

ಮೈಸೂರು ದಸರಾ: ಬನ್ನಿಮರಕ್ಕೆ ಪೂಜೆ ಸಲ್ಲಿಸಿದ ರಾಜವಂಶಸ್ಥ ಯದುವೀರ್

ಮೈಸೂರು,ಅಕ್ಟೋಬರ್,12,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮ ಕಳೆಗಟ್ಟಿದ್ದು  ಇಂದು ಜಂಬೂಸವಾರಿ ನಡೆಯಲಿದ್ದು, ಅರಮನೆಯಲ್ಲಿ ಸಾಂಪ್ರದಾಯಕ ಪೂಜೆ ಪುನಸ್ಕಾರ ನಡೆಯುತ್ತಿದೆ.

ವಜ್ರಮುಷ್ಠಿ ಕಾಳಗ ನಡೆದ ಬಳಿಕ  ಪಲ್ಲಕ್ಕಿಯೊಂದಿಗೆ  ವಿಜಯಯಾತ್ರೆಯಲ್ಲಿ ತೆರಳಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿಮರಕ್ಕೆ ಪೂಜೆ ಸಲ್ಲಿಸಿದರು.

ಸಾಂಪ್ರದಾಯಿಕ ಧಿರಿಸಿನೊಂದಿಗೆ  ಯದುವೀರ್‌ ಒಡೆಯರ್‌ ಅವರು  ಮೈಸೂರಿನ ಅರಮನೆ ಆವರಣದಲ್ಲಿರುವ ಬನ್ನಿ ಮರದ ಬಳಿ ಆಗಮಿಸಿ  ಅಲ್ಲಿ ವಿಜಯದಶಮಿ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದರು. ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.  ಬನ್ನಿಮರಕ್ಕೆ  ಪೂಜೆ ಸಲ್ಲಿಸಿದ ಬಳಿಕ ಅರಮನೆಗೆ ತೆರಳಿ ಯದುವೀರ್ ಕಂಕಣ ವಿಸರ್ಜನೆ ಮಾಡಲಿದ್ದಾರೆ.

Key words: Mysore Dasara:, Yaduveer, worshipe, Banni tree