Friday, August 14, 2026

BDA Apartments

Home Front Page ಕುತೂಹಲ ಕೆರಳಿಸಿದ ಸಚಿವ ಸತೀಶ್ ಜಾರಕಿಹೊಳಿ- ಬಿ.ವೈ ವಿಜಯೇಂದ್ರ ಭೇಟಿ

ಕುತೂಹಲ ಕೆರಳಿಸಿದ ಸಚಿವ ಸತೀಶ್ ಜಾರಕಿಹೊಳಿ- ಬಿ.ವೈ ವಿಜಯೇಂದ್ರ ಭೇಟಿ

ಬೆಂಗಳೂರು, ಅಕ್ಟೋಬರ್,7,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಅತ್ತ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿದ್ದರೇ ಇತ್ತ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಈ ಮಧ್ಯೆಯೇ ಇದೀಗ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿಯಾಗಿದ್ದಾರೆ.

ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು  ಬಿ.ವೈ ವಿಜಯೇಂದ್ರ ಭೇಟಿಯಾಗಿ ಚರ್ಚೆ ನಡೆಸಿದ್ದು ಮತ್ತಷ್ಟು ಕುತೂಹಲ ಕೆರಳಿಸಿದೆ. ಸತೀಶ್ ಜಾರಕಿಹೊಳಿ  ಹಲವು ಬಾರಿ ದೆಹಲಿಗೆ ಹೋಗಿದ್ದರು ಮೊನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿದ್ದರು. ನಿನ್ನೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನ ಭೇಟಿಯಾಗಿದ್ದರು.

ಇದೀಗ ಇಂದು ಬಿವೈ ವಿಜಯೇಂದ್ರ ಅವರು ಸತೀಶ್ ಜಾರಕಿಹೊಳಿಯವರನ್ನ ಭೇಟಿಯಾಗಿದ್ದಾರೆ. ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ಇಲಾಖೆಗೆ  ಸಂಬಂಧಿಸಿದ ಚರ್ಚೆಗೆ ಬಂದಿದ್ದೇನೆ. ಟೋಲ್ ಸಮಸ್ಯೆ ಕುರಿತು ಚರ್ಚಿಸಲು ಭೇಟಿಯಾಗಿದ್ದೇನೆ ಎಂದಿದ್ದಾರೆ. ಬಿವೈ ವಿಜಯೇಂದ್ರ ಜೊತೆ ಸ್ಥಳೀಯ ಮುಖಂಡರೂ ಆಗಮಿಸಿದ್ದರು ಎನ್ನಲಾಗಿದೆ.

Key words: Minister, Sathish Jarakiholi-BY Vijayendra, met