Thursday, September 24, 2026

BDA Apartments

Home Crime ರೇಣುಕಾಸ್ವಾಮಿ ಕೊಲೆ ಕೇಸ್: ಮೂವರು ಆರೋಪಿಗಳು ಜೈಲಿನಿಂದ ರಿಲೀಸ್

ರೇಣುಕಾಸ್ವಾಮಿ ಕೊಲೆ ಕೇಸ್: ಮೂವರು ಆರೋಪಿಗಳು ಜೈಲಿನಿಂದ ರಿಲೀಸ್

ತುಮಕೂರು, ಅಕ್ಟೋಬರ್,2,2024 (www.justkannada.in):  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದಿರುವ ಮೂವರು ಆರೋಪಿಗಳನ್ನ ತುಮಕೂರು ಜಿಲ್ಲಾ ಕಾರಾಗೃಹದಲ್ಲಿಂದ ಬಿಡುಗಡೆ ಮಾಡಲಾಗಿದೆ.

ಆರೋಪಿಗಳಾದ  ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕಳೆದ ತಿಂಗಳ ಸೆಪ್ಟೆಂಬರ್ 23 ರಂದು ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಜಾಮೀನು ಸಿಕ್ಕಿ 10 ದಿನಗಳ ಬಳಿಕ ಮೂವರು ಆರೋಪಿಗಳು ಜೈಲಿನಿಂದ ಬಿಡುಗಡೆ ಆಗಿದ್ದಾರೆ.

ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ನಿಂದ, ಆರೋಪಿ ನಿಖಿಲ್ ನಾಯಕ್ ಹಾಗೂ ಕಾರ್ತಿಕ್ ಗೆ 57 ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಸಿಕ್ಕಿತ್ತು. ಜಾಮೀನಿಗೆ ಶ್ಯೂರಿಟಿದಾರರು ಸಿಗದೇ ಆರೋಪಿಗಳ ಕುಟುಂಬಸ್ಥರು ಪರದಾಟ ನಡೆಸಿದ್ದರು.  ನಿನ್ನೆ ಜಾಮೀನು ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆ. ನಿನ್ನೆ ರಾತ್ರಿಯೇ ತುಮಕೂರು ಜೈಲಾಧಿಕಾರಿಗೆ ಜಾಮೀನು ಆದೇಶ ಪ್ರತಿ ತಲುಪಿತ್ತು. ಇಂದು ಬಿಡುಗಡೆ ಪ್ರಕ್ರಿಯೆ ಮುಗಿಸಿ ಮೂವರು ಆರೋಪಿಗಳನ್ನ ತುಮಕೂರು ಜೈಲಾಧಿಕಾರಿ ಜೈಲಿನಿಂದ ರಿಲೀಸ್ ಮಾಡಿದರು.

ರೇಣುಕಾಸ್ವಾಮಿ ಕೊಲೆ ಕೇಸ್: ಮೂವರು ಆರೋಪಿಗಳು ಜೈಲಿನಿಂದ ರಿಲೀಸ್ VTU TOP BANNER 04

Key words: Renukaswamy, murder case, Three accused, released, jail