Tuesday, August 4, 2026

BDA Apartments

Home Front Page ಸಿಎಂ ಮೇಲೆ ಬೋಗಸ್ ಆರೋಪ ಮಾಡುತ್ತಿದ್ದಾರೆ- ಎಂಎಲ್ ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿ

ಸಿಎಂ ಮೇಲೆ ಬೋಗಸ್ ಆರೋಪ ಮಾಡುತ್ತಿದ್ದಾರೆ- ಎಂಎಲ್ ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿ

ಮೈಸೂರು,ಸೆಪ್ಟಂಬರ್,21,2024 (www.justkannada.in):  ಬಿಜೆಪಿ, ಜೆಡಿಎಸ್ ನಾಯಕರು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಬೋಗಸ್ ಆರೋಪ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಇಂದು ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ಧರಾಮಯ್ಯ,  ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅನುದಾನ ಬಳಕೆ ತಪ್ಪಲ್ಲ. ಮುಡಾ ವ್ಯಾಪ್ತಿಯಲ್ಲಿ ಪ್ರದೇಶಗಳ ಅಭಿವೃದ್ಧಿಗೆ ಹಣ ಬಳಕೆ ಮಾಡಿದರೇ ತಪ್ಪಿಲ್ಲ. ಆದರೆ ಬಿಜೆಪಿ ಜೆಡಿಎಸ್ ನಾಯಕರು  ಸಿಎಂ ಸಿದ್ದರಾಮಯ್ಯ ಅವರ ಮೇಲೆ ಬೋಗಸ್ ಆರೋಪ ಮಾಡುತ್ತಿದ್ದಾರೆ

ಸರ್ಕಾರದ ವಿರುದ್ದ ಮಾತನಾಡಲು ಅವರಿಗೆ ಏಣು ಇಲ್ಲ.  ಹೀಗಾಗಿ ಸಿಎಂ ಮತ್ತು ಸರ್ಕಾರದ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.

Key words: MLC, Dr. Yathindra Siddaramaiah , bogus accusation, against, CM