Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Crime ‘ವಕ್ಫ್ ತಂಟೆಗೆ ಬಂದ್ರೆ  ಮುಸ್ಲಿಂ ಸಮಾಜ ನಿಮ್ಮನ್ನು ಮುಗಿಸುತ್ತೆ’ ಎಂದಿದ್ದ SDPI ಮುಖಂಡನ ವಿರುದ್ದ ಎಫ್...

‘ವಕ್ಫ್ ತಂಟೆಗೆ ಬಂದ್ರೆ  ಮುಸ್ಲಿಂ ಸಮಾಜ ನಿಮ್ಮನ್ನು ಮುಗಿಸುತ್ತೆ’ ಎಂದಿದ್ದ SDPI ಮುಖಂಡನ ವಿರುದ್ದ ಎಫ್ ಐಆರ್

ಕೊಪ್ಪಳ, ಸೆಪ್ಟೆಂಬರ್​ 17,2024 (www.justkannada.in): ವಕ್ಫ್ ತಂಟೆಗೆ ಬಂದ್ರೆ  ಮುಸ್ಲಿಂ ಸಮಾಜ ನಿಮ್ಮನ್ನು ಮುಗಿಸುತ್ತೆ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಎಸ್ ಡಿಪಿಐ ಮುಖಂಡನ ವಿರುದ್ದ ಕಾರಟಗಿ ಪೊಲೀಸ್​ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಎಸ್​ಡಿಪಿಐ  ಜಿಲ್ಲಾ ಕಾರ್ಯದರ್ಶಿ ಇಮ್ರಾನ್ ಸೇರಿದಂತೆ ಮೂವರ ವಿರುದ್ಧ ಕಾರಟಗಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ವಕ್ಫ್​ ಬಿಲ್​-2024 ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಸೆಪ್ಟೆಂಬರ್​ 13ರಂದು ಕಾರಟಗಿ ಪಟ್ಟಣದಲ್ಲಿ ಮುಸ್ಲಿಮರಿಂದ ಪ್ರತಿಭಟನೆ  ನಡೆದಿತ್ತು.

ಈ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ ಎಸ್​ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಮ್ರಾನ್, ವಕ್ಫ್​​ ತಂಟೆಗೆ ಬಂದರೆ ನಿಮ್ಮನ್ನು ಮುಸ್ಲಿಂ ಸಮಾಜ ಮುಗಿಸುತ್ತೆ. ನೀವು ಯಾವ ಸಂತತಿಯಿಂದ ಬಂದಿದ್ದಿರೋ, ಯಾವ ದೇಶದಿಂದ ಬಂದಿದ್ದೀರೋ ಗೊತ್ತಿಲ್ಲ. ಆದರೆ, ನಿಮ್ಮ ಸಂತತಿಯನ್ನು ಮುಗಿಸಲಿಕ್ಕೆ ಮುಸ್ಲಿಂ ಸಮಾಜ ಇರುವುದು ಎನ್ನುವ ಸಂದೇಶ ಬಿಜೆಪಿಯವರಿಗೆ ನೀಡುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದನು.

ಈ ಸಂಬಂಧ ಇದೀಗ ಆತನ ವಿರುದ್ಧ ಬಿಜೆಪಿ ಕಾರಟಗಿ ಪೊಲೀಸ್​ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

Key words: FIR, against , SDPI, leader