Sunday, August 16, 2026

BDA Apartments

Home Front Page 5 ವರ್ಷ ಸಿದ್ದರಾಮಯ್ಯನವರೇ ಸಿಎಂ: ನಾನಂತೂ ಯಾವ ರೇಸ್ ನಲ್ಲೂ ಇಲ್ಲ- ಆರ್.ವಿ ದೇಶಪಾಂಡೆ

5 ವರ್ಷ ಸಿದ್ದರಾಮಯ್ಯನವರೇ ಸಿಎಂ: ನಾನಂತೂ ಯಾವ ರೇಸ್ ನಲ್ಲೂ ಇಲ್ಲ- ಆರ್.ವಿ ದೇಶಪಾಂಡೆ

ಧಾರವಾಡ,ಸೆಪ್ಟಂಬರ್,4,2024 (www.justkannada.in):  ಐದು ವರ್ಷಗಳ ಕಾಲ ಸಿದ್ಧರಾಮಯ್ಯನವರೇ ಸಿಎಂ. ನಾನಂತೂ ಯಾವ ರೇಸ್ ನಲ್ಲೂ ಇಲ್ಲ. ನನಗೆ ಯಾವುದೇ ಆಸೆಯೂ ಇಲ್ಲ ಎಂದು ಮಾಜಿ ಸಚಿವ ಆರ್.ವಿ ದೇಶಪಾಂಡೆ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ವಿ ದೇಶಪಾಂಡೆ,  ಸಿದ್ಧರಾಮಯ್ಯ ನಾಯಕತ್ವದಲ್ಲಿ ಯಾರಿಗೂ ಅಸಮಾಧಾನ ಇಲ್ಲ ಡಿಕೆ ಶಿವಕುಮಾರ್ ಕೂಡ ಕಷ್ಟ ಪಟ್ಟು ಕೆಲಸ  ಮಾಡಿದ್ದಾರೆ. ಈ ವಯಸ್ಸಿನಲ್ಲಿ  ನಮಗೆ ಅವರು ಚುರುಕು ಮೂಡಿಸಿದ್ದಾರೆ ಎಂದರು.

ಸಚಿವ ಜಮೀರ್ ಅಹ್ಮದ್ ಖಾನ್ ಸಿಎಂ ಆಸೆ ವ್ಯಕ್ತಪಡಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ವಿ ದೇಶಪಾಂಡೆ,  ಆಸೆ ಇರುವುದು ಬೇರೆ,  ದುರಾಸೆ ಮಾಡುವುದು ಬೇರೆ . ನಮಗಂತೂ ಯಾವುದೇ ಆಸೆ ಇಲ್ಲ. ಸಿಎಂ ರೇಸ್ ನಲ್ಲೂ ನಾನು ಇಲ್ಲ. ಇಲ್ಲಿಗೆ ಆ ವಿಷಯ ಮುಕ್ತಾಯ ಎಂದರು.

ಸಿದ್ದರಾಮಯ್ಯ ಅನುಮತಿ ಕೊಟ್ಟರೇ ನಾನು ಸಿಎಂ ಆಗುತ್ತೇನೆ ಎಂದು  ಆರ್. ವಿ ದೇಶಪಾಂಡೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು.

Key words: Siddaramaiah, CM, 5 years, RV Deshpande