Monday, August 3, 2026

BDA Apartments

Home Front Page ಚನ್ನಪಟ್ಟಣ ಉಪಚುನಾವಣೆ: ಟಿಕೆಟ್ ಕೈತಪ್ಪಿದ್ರೆ ಸಿ.ಪಿ ಯೋಗೇಶ್ವರ್ ಬಂಡಾಯ ಸ್ಪರ್ಧೆ ಫಿಕ್ಸ್

ಚನ್ನಪಟ್ಟಣ ಉಪಚುನಾವಣೆ: ಟಿಕೆಟ್ ಕೈತಪ್ಪಿದ್ರೆ ಸಿ.ಪಿ ಯೋಗೇಶ್ವರ್ ಬಂಡಾಯ ಸ್ಪರ್ಧೆ ಫಿಕ್ಸ್

ರಾಮನಗರ,ಆಗಸ್ಟ್,12,2024 (www.justkannada.in):  ಚನ್ನಪಟ್ಟಣ ಉಪಚುನಾಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಸೆ ಇದೆ. ಆದರೆ  ಟಿಕೆಟ್ ಕೈತಪ್ಪಿದರೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಗೆ ತೀರ್ಮಾನಿಸಿದ್ದೇನೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ  ಸಿ.ಪಿ ಯೋಗೇಶ್ವರ್,  ನಾನು ಎನ್ ಡಿಎ ಟಿಕೆಟ್ ಆಕಾಂಕ್ಷಿ ಎನ್ ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನ ಮಾಡಿದ್ದೇನೆ. ಟಿಕೆಟ್ ಕೈತಪ್ಪಿದರೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಕಾಂಗ್ರೆಸ್ ನಿಂದ ಯಾವ ಕಾರಣಕ್ಕೂ ಸ್ಪರ್ಧಿಸಲ್ಲ ಎಂದರು.

ಹೈಕಮಾಂಡ್  ಭೇಟಿಯಾಗಿ ಚರ್ಚಿಸಿದ್ದೇನೆ.  ರಾಜ್ಯ ನಾಯಕರು ಟಿಕೆಟ್ ಭರವಸೆ ನೀಡಿದ್ದಾರೆ. ಕೇಂದ್ರ ಸಚಿವ ಹೆಚ್.ಡಿಕೆಗೆ ಸ್ವಲ್ಪ ಮುಂಗೋಪ. ಕುಮಾರಸ್ವಾಮಿ ಜತೆ ವರಿಷ್ಠರು ಮಾತನಾಡುತ್ತಾರೆ. ಕುಮಾರಸ್ವಾಮಿ ಒಪ್ಪಿಗೆ ನೀಡುವ ಭರವಸೆ ಇದೆ. ಹೀಗಾಗಿ ಚನ್ನಪಟ್ಟಣದಿಂದ ಸ್ಪರ್ಧೆಗೆ ಫಿಕ್ಸ್ ಎಂದು ತಿಳಿಸಿದರು.

Key words: Channapatna, by-election, CP Yogeshwar, Rebel