Sunday, August 9, 2026

BDA Apartments

Home Front Page ಹೆಚ್.ಡಿಕೆಗೆ ಸಿದ್ದಾಂತ ಮುಖ್ಯ ಅಲ್ಲ: ಅಧಿಕಾರಕ್ಕಾಗಿ ಏನು ಬೇಕಾದ್ರೂ ಮಾಡ್ತಾರೆ- ಸಚಿವ ಎಂ.ಬಿ ಪಾಟೀಲ್

ಹೆಚ್.ಡಿಕೆಗೆ ಸಿದ್ದಾಂತ ಮುಖ್ಯ ಅಲ್ಲ: ಅಧಿಕಾರಕ್ಕಾಗಿ ಏನು ಬೇಕಾದ್ರೂ ಮಾಡ್ತಾರೆ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ಆಗಸ್ಟ್,3,2024 (www.justkannada.in): ಹೆಚ್.ಡಿ ಕುಮಾರಸ್ವಾಮಿಗೆ ಸಿದ್ದಾಂತ ಮುಖ್ಯವಲ್ಲ.  ಅಧಿಕಾರಕ್ಕಾಗಿ ಏನು ಬೇಕಾದ್ರೂ ಮಾಡ್ತಾರೆ. ಎಲ್ಲಿಗಾದ್ರೂ ಹೋಗುತ್ತಾರೆ ಎಂದು ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದರು.

ಇಂದು ರಾಮನಗರದಲ್ಲಿ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ , ಬಿಜೆಪಿ, ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಈಗ ಚಪ್ಪಾಳೆ ಹೊಡೆಯುತ್ತಿದ್ದೀರಿ ಮತ ಹಾಕುವಾಗ ಎಲ್ಲಿ ಹೋಗಿತ್ತು. ಜನಪರ ಕೆಲಸ ಕೆಲಸ ಮಾಡಿ ಡಿ.ಕೆ ಸುರೇಶ್ ರನ್ನ ಯಾಕೆ ಸೋಲಿಸಿದ್ರಿ. ಉಪಚುನಾವಣೆಯಲ್ಲಿ ಆ ರೀತಿ ಮಾಡಬೇಡಿ ಎಂದು ಮನವಿ ಮಾಡಿದರು.

ಹೆಚ್.ಡಿ ಕುಮಾರಸ್ವಾಮಿ ವಿಧಾನಸಭೆ ಚುನಾವಣೆಯಲ್ಲಿ 40 ಸೀಟ್ ಬರುತ್ತೆ ಎಂಬ ಕನಸಿನಲ್ಲಿದ್ದರು. ಆಗ ಬಿಜೆಪಿ ಅಥವಾ ಕಾಂಗ್ರೆಸ್ ನವರು ನಮ್ಮ ಬಳಿ ಬರುತ್ತಾರೆಂದು ನಂಬಿದ್ದರು. ಆದರೆ  ರಾಜ್ಯದ ಜನ ಅದನ್ನೆಲ್ಲಾ ಬುಡಮೇಲು ಮಾಡಿದರು ಎಂದು ಎಂ.ಬಿ ಪಾಟೀಲ್ ಲೇವಡಿ ಮಾಡಿದರು.

Key words: Ideology, not important, HDK, Minister, MB Patil