Sunday, August 2, 2026

BDA Apartments

Home Front Page ಬಿಜೆಪಿಯಿಂದ ಪಾದಯಾತ್ರೆ, ಅಹೋರಾತ್ರಿ ಧರಣಿಗೆ ಸಚಿವ ರಾಮಲಿಂಗರೆಡ್ಡಿ ವ್ಯಂಗ್ಯ

ಬಿಜೆಪಿಯಿಂದ ಪಾದಯಾತ್ರೆ, ಅಹೋರಾತ್ರಿ ಧರಣಿಗೆ ಸಚಿವ ರಾಮಲಿಂಗರೆಡ್ಡಿ ವ್ಯಂಗ್ಯ

ಬೆಂಗಳೂರು,ಜುಲೈ,25,2024 (www.justkannada.in):  ಮುಡಾ ಹಗರಣ ಚರ್ಚೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಮತ್ತು ಪಾದಯಾತ್ರೆ ನಡೆಸಲು ಮುಂದಾಗಿರುವ ಕುರಿತು ಸಾರಿಗೆ ಸಚಿವ ರಾಮಲಿಂಗರೆಡ್ಡಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಬಿಜೆಪಿಯವರು ಅಹೋರಾತ್ರಿ ಧರಣಿ ಮಾಡಿದ್ದಾರೆ. ಆದರೆ ಸುಮ್ಮನೆ ಕುಳಿತುಕೊಂಡು ಮಜಾ ಮಾಡಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ. ಆದರೆ ಪಾದಯಾತ್ರೆ ಮಾಡೋಕೆ ಬಿಜೆಪಿಯವರಿಗೆ ಆಗಲ್ಲ 10 ಕಿ.ಮೀ ಹೋಗವವರೆಗೆ ಬಿದ್ದು ಬಿಡ್ತಾರೆ ಎಂದು ಲೇವಡಿ ಮಾಡಿದರು.

ವಾಲ್ಮಿಕಿ ಅಕ್ರಮ ಹಗರಣ ಹೊಸದು ಮುಡಾ ಹಳೆಯದ್ದು. ಬಿಜೆಪಿ ಅವಧಿಯಲ್ಲೇ ಸಾಕಷ್ಟು ಹಗರಣಗಳು ನಡೆದಿದೆ. ಭ್ರಷ್ಟರಲ್ಲೇ ಭ್ರಷ್ಟರು ಅಂದರೇ ಬಿಜೆಪಿಯವರು ಎಂದು ಸಚಿವ ರಾಮಲಿಂಗರೆಡ್ಡಿ ಕಿಡಿಕಾರಿದರು.

Key words: Minister, Ramalingareddy, BJP, JDS, protest