Wednesday, September 30, 2026

BDA Apartments

ಮೈಸೂರು ಅಭಿವೃದ್ಧಿಗೆ ಒತ್ತು: ಸಿಎಂ ಮತ್ತು ಪ್ರತಾಪ್ ಸಿಂಹರ ಸಹಕಾರ ಕೇಳುತ್ತೇ...
Home Front Page ಮೈಸೂರು ಅಭಿವೃದ್ಧಿಗೆ ಒತ್ತು: ಸಿಎಂ ಮತ್ತು ಪ್ರತಾಪ್ ಸಿಂಹರ ಸಹಕಾರ ಕೇಳುತ್ತೇನೆ- ಸಂಸದ ಯದುವೀರ್

ಮೈಸೂರು ಅಭಿವೃದ್ಧಿಗೆ ಒತ್ತು: ಸಿಎಂ ಮತ್ತು ಪ್ರತಾಪ್ ಸಿಂಹರ ಸಹಕಾರ ಕೇಳುತ್ತೇನೆ- ಸಂಸದ ಯದುವೀರ್

ಮೈಸೂರು,ಜೂನ್,13,2024 (www.justkannada.in): ಮೈಸೂರಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ. ಅಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ, ಪ್ರತಾಪ್ ಸಿಂಹರ ಸಹಕಾರವನ್ನು ಕೇಳುತ್ತೇನೆ. ಮುಂದಿನ ದಿನಗಳಲ್ಲಿ ಅವರನ್ನು ಭೇಟಿ ಮಾಡಿ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತೇನೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಸಂಸದರಾದ ಬಳಿಕ ಮೊದಲ ಬಾರಿಗೆ  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಮೈಸೂರು ಅಭಿವೃದ್ಧಿಗೆ ಒತ್ತು yaduveer yaduveer 5

ಮೈಸೂರು ಕೊಡಗು ಕ್ಷೇತ್ರದ ಮತದಾರರಿಗೆ ಧನ್ಯವಾದ ತಿಳಿಸಿದ ಯದುವೀರ್, ಮೈಸೂರು ಕೊಡಗು ಕ್ಷೇತ್ರದಲ್ಲಿ 14ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಮೈಸೂರು ಕೊಡಗು ಕ್ಷೇತ್ರದ ಜನತೆ ನಮಗೆ ಬೆಂಬಲ ನೀಡಿದ್ದಾರೆ. ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಲಿಕ್ಕೆ ಜನತೆ ಅವಕಾಶ ಮಾಡಿಕೊಟ್ಟಿದ್ದಾರೆ.. ರಾಜ್ಯದ ಐವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ. ಅಭಿವೃದ್ಧಿಗೆ ಇದು ಸಹಕಾರ ಆಗುತ್ತದೆ. ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಬರಲು ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಮಗೆ ಮತ ನೀಡಿರುವವರಿಗು ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

ಮೈಸೂರು ಪ್ರವಾಸಿ ತಾಣವಾಗಿರುವ ಕಾರಣ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಮೈಸೂರಿನ ಪಾರಂಪರಿಕ ಕಟ್ಟಡಗಳ ನಗರವಾಗಿದೆ. ಹಾಗಾಗಿ ದೇವರಾಜ, ಲ್ಯಾನ್ಸ್ ಡೌನ್ ಕಟ್ಟಡಗಳನ್ನ ನೆಲಸಮ ಮಾಡುವ ಅವಶ್ಯಕತೆ ಇಲ್ಲ. ಹಾಗೆಯೇ ಅದನ್ನ ಸಂರಕ್ಷಣೆ ಮಾಡುತ್ತೇವೆ. ಮೈಸೂರು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಕೈಗಾರಿಕೆಗಳ ಅಭಿವೃದ್ಧಿ ಮಾಡುತ್ತೇವೆ. ಈಗಾಗಲೇ ಕುವೆಂಪುನಗರದಲ್ಲಿ ನನ್ನ ಕಚೇರಿ ತೆರೆಯಲಾಗಿದೆ.. ಸಾರ್ವಜನಿಕರು ನನ್ನ ಅಧಿಕೃತ ಕಚೇರಿಯಲ್ಲಿ ನನ್ನನ್ನು ಭೇಟಿ ಮಾಡಬಹುದು ಎಂದು ತಿಳಿಸಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಿವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಗ್ಯಾರಂಟಿ ಯೋಜನೆಗಳಿಂದಲೇ ಅವರು ಅಧಿಕಾರಕ್ಕೆ ಬಂದಿದ್ದಾರೆ.. ಹಾಗಾಗಿ ಗ್ಯಾರಂಟಿ ಯೋಜನೆ ಮುಂದುವರೆಸುವುದು ಸೂಕ್ತ. ಆದರೆ ಮುಂದುವರೆಸಬೇಕೋ ಬೇಡವೋ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

Key words: development, Mysore, BJP, MP, Yaduveer