ಮೈಸೂರು,ಮೇ,30,2024 (www.justkannada.in): ಮೈಸೂರಿನಲ್ಲಿ ವರುಣ ನಾಲೆ ಬಳಿ ಯುವಕನ ಶವ ಪತ್ತೆಯಾಗಿದ್ದು ಯುವಕನನ್ನ ಕೊಲೆ ಮಾಡಿ ಬಿಸಾಕಿರುವ ಆರೋಪ ಕೇಳಿ ಬಂದಿದೆ.
ರಾಘವೇಂದ್ರ (35) ಎಂಬುವವರ ಶವ ಪತ್ತೆಯಾಗಿದೆ. ರಾಘವೇಂದ್ರ ಮೈಸೂರು ತಾಲ್ಲೂಕು ಮಾವಿನಹಳ್ಳಿ ಗ್ರಾಮದವರಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಅದೇ ಗ್ರಾಮದ ಗೋವಿಂದ ಕರಿಯ ಎಂಬುವವರು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. 
ಕೆಲ ದಿನಗಳ ಹಿಂದೆ ರಾಘವೇಂದ್ರ ಜೊತೆ ಆರೋಪಿಗಳು ಗಲಾಟೆ ಮಾಡಿದ್ದರು. ಇನ್ನು ರಾಘವೇಂದ್ರ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನೆನ್ನೆ ರಾತ್ರಿ ಮನೆಯಿಂದ ಹೋದವರು ಮತ್ತೆ ವಾಪಸ್ಸು ಬಂದಿರಲಿಲ್ಲ. ಇದೀಗ ವರುಣ ನಾಲೆ ಬಳಿ ರಾಘವೇಂದ್ರ ಶವ ಪತ್ತೆಯಾಗಿದ್ದು, ಕತ್ತು ಮುಖದ ಮೇಲೆ ಗಾಯದ ಗುರುತು ಕಂಡು ಬಂದಿದೆ. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: mysore, body, young man, found






